

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಬಾಣಾವರ ಪಟ್ಟಣದ ಹೊರವಲಯದಲ್ಲಿರುವ ರುದ್ರ ಭೂಮಿಯಲ್ಲಿ ನೆಲೆಸಿರುವ ಶ್ರೀ ರುದ್ರೇಶ್ವರ ಸ್ವಾಮಿಯವರ ಮಹಾ ಅಗ್ನಿ ಜ್ವಾಲಾ ಮಹಾಕೂಂಡ ಮಹೋತ್ಸವಕ್ಕೆ ಸುಕ್ಷೇತ್ರ ಶ್ರೀ ಕೋಡಿಮಠ ಹಾರನಹಳ್ಳಿ ಮಹಾಸಂಸ್ಥಾನದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಆಶೀರ್ವಾದದೊಂದಿಗೆ ಭಾನುವಾರ ಚಾಲನೆ ದೊರೆಯಿತು.
ಸೋಮವಾರ ಮುಂಜಾನೆ 5:30ರಿಂದ ಮಹಾ ಗಣಪತಿ ಪೂಜೆಯೊಂದಿಗೆ ಈ ಮಹಾಕುಂಡ ಅಗ್ನಿ ಜ್ವಾಲಾ ಮಹೋತ್ಸವ ಪ್ರಾರಂಭವಾಯಿತು. ಈ ಹಿನ್ನೆಲೆಯಲ್ಲಿ ವಿವಿಧ ಪೂಜಾ ಪುರಸ್ಕಾರಗಳು ಜರುಗಿದವು. ಮಂಗಳವಾರ ಬೆಳಗ್ಗೆ 8:30ರ ಒಳಗೆ ಸಲ್ಲುವ ಮೇಷ ಶುಭಲಗ್ನ ದಲ್ಲಿ ಗುರುಲಿಂಗ ಜಂಗಮರ ಆರಾಧನೆಯಂದಿಗೆ ಶ್ರೀ ರುದ್ರೇಶ್ವರ ಸ್ವಾಮಿಯವರ ಅಗ್ನಿ ಜ್ವಾಲಾ ಮಹಾ ಕುಂಡ ಮಹೋತ್ಸವವು ನಡೆಯಲಿದೆ.
ನಂತರ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ಭಕ್ತಾದಿಗಳು ಸಕಾಲಕ್ಕೆ ಆಗಮಿಸಿ ಶ್ರೀ ಸ್ವಾಮಿ ಅವರ ಕೃಪೆಗೆ ಪಾತ್ರರಾಗಬೇಕು ಎಂದು ದೇವಾಲಯದ ಆಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.