ಸೆಲ್ಫಿ ವಿತ್ ನನ್ನ ರಾಮ ಅಭಿಯಾನಕ್ಕೆ ಚಾಲನೆ

21 ckm 7
ಚಿಕ್ಕಮಗಳೂರಿನ ಜಿಲ್ಲಾ ಬಿಜೆಪಿ ಕಚೇರಿ ಅವರಣದಲ್ಲಿ ಯುವ ಮೋರ್ಚಾದಿಂದ ಆರಂಭಿಸಿರುವ ಸೆಲ್ಫಿ ವಿತ್ ನನ್ನ ರಾಮ ಅಭಿಯಾನಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ ಚಾಲನೆ ನೀಡಿದರು. ಸಂತೋಷ್ ಕೋಟ್ಯಾನ್, ಡಾ. ನರೇಂದ್ರ, ನಾರಾಯಣ ಗೌಡ, ಹಿರೇಮಗಳೂರು ಪುಟ್ಟಸ್ವಾಮಿ ಇದ್ದರು.
Published on

ಚಿಕ್ಕಮಗಳೂರು: ಜಗತ್ತಿನ ಕೋಟ್ಯಂಂತರ ಹಿಂದೂಗಳ ಹೃದಯ ಸಾಮ್ರಾಟ ಶ್ರೀರಾಮನ ಜನ್ಮ ಸ್ಥಳ ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಅದ್ಧೂರಿಗಿ ನಡೆಯಲಿದ್ದು, ಈ ಸಂದರ್ಭದಲ್ಲಿ ದೇಶದ ವಿವಿಧೆಡೆ ಹಬ್ಬದ ವಾತಾವರಣವಿರಲಿದೆ. ಈ ಹಬ್ಬದ ಸಂಭ್ರಮದಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ ಕರೆ ನೀಡಿದರು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಾನುವಾರ ಬಿಜೆಪಿ ಯುವ ಮೋರ್ಚಾದಿಂದ ಆರಂಭಿಸಿರುವ ಸೆಲ್ಫಿ ವಿತ್ ನನ್ನ ರಾಮ ಅಭಿಯಾನಕ್ಕೆ ಬಿಜೆಪಿ ಕಚೇರಿಯಲ್ಲಿ ಪಕ್ಷದ ವಿವಿಧ ಮುಖಂಡರೊಂದಿಗೆ ಸೇರಿ ಶ್ರೀರಾಮಚಂದ್ರನ ಭಾವಚಿತ್ರದೊಂದಿಗೆ ಸೆಲ್ಫಿ ತೆಗೆದು ಕ್ಯೂಆರ್ ಕೋಡ್‌ಗೆ ಅಪ್‌ಲೋಡ್ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿ, ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ನಮ್ಮ ಹತ್ತಿರದ ದೇವಸ್ಥಾನಗಳಲ್ಲಿ ಈಗಾಗಲೇ ಪೂಜೆ, ಹೋಮ, ಹವನಗಳು, ಸಂಕೀರ್ತನೆಗಳು ನಡೆಯಲಿದೆ. 500 ವರ್ಷಗಳ ಹೋರಾಟದ ನಂತರ ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ. ಹಿಂದುಗಳು ಒಗ್ಗಟ್ಟಾಗಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಕೊಡದೆ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಸಹಕಾರ ಕೊಡಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net