ನಾರಂಪಾಡಿ ಸಾಮಾಜಿಕ ಮಾಧ್ಯಮ ಪ್ರಚಾರಕ್ಕೆ ಚಾಲನೆ

Published on

ಬದಿಯಡ್ಕ: ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಫೆ.2ರಿಂದ 16ರ ತನಕ ನಡೆಯುವ ನವೀಕರಣ ಪುನಃಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮತ್ತು ವರ್ಷಾವಧಿ ಉತ್ಸವದಂಗವಾಗಿ ಪ್ರಚಾರ ಸಮಿತಿ ವತಿಯಿಂದ ಸಾಮಾಜಿಕ ಮಾಧ್ಯಮ ಪ್ರಚಾರದ ಉದ್ಘಾಟನೆ ಭಾನುವಾರ ನಡೆಯಿತು.

ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ರಹ್ಮಕಲಶಾಭಿಷೇಕ ಸಮಿತಿ ಅಧ್ಯಕ್ಷ ನಿತ್ಯಾನಂದ ಶೆಣೈ ಬಿಡುಗಡೆಗೊಳಿಸಿದರು. ಶ್ರೀ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ತಲೇಕ, ಬ್ರಹ್ಮಕಲಶಾಭಿಷೇಕ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಮಾಸ್ತರ್ ನಾರಂಪಾಡಿ, ಕೋಶಾಧಿಕಾರಿ ಸೀತಾರಾಮ ಕುಂಜತ್ತಾಯ, ಹಣಕಾಸು ಸಮಿತಿ ಅಧ್ಯಕ್ಷ ಸಂಜೀವ ಶೆಟ್ಟಿ ಮೊಟ್ಟೆಕುಂಜ, ಸಂಚಾಲಕ ಹರಿನಾರಾಯಣ ಮಾಸ್ತರ್ ಶಿರಂತಡ್ಕ, ಡಾ.ಶ್ರೀನಿಧಿ ಸರಳಾಯ, ಪ್ರಚಾರ ಸಮಿತಿ ಅಧ್ಯಕ್ಷ ಗಂಗಾಧರ್ ಕೆ., ಸಂಚಾಲಕ ಪ್ರಮೋದ್, ಬ್ರಹ್ಮಕಲಶಾಭಿಷೇಕ ಸಮಿತಿ ಕಾರ್ಯದರ್ಶಿಗಳಾದ ಸೀತಾರಾಮ ರಾವ್ ಪಿಲಿಕೂಡ್ಲು, ಕೃಷ್ಣಮೂರ್ತಿ ಎಡಪ್ಪಾಡಿ, ರವೀಂದ್ರ ರೈ ಗೋಸಾಡ, ಗೋಪಾಲಕೃಷ್ಣ, ಐತ್ತಪ್ಪ ಮವ್ವಾರು, ವಸಂತಿ ಟೀಚರ್, ದೇವರಾಜ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net