ಮೈಸೂರು ನಗರ ಮತ್ತು ತಾಲೂಕು ಪತ್ರ ಬರಹಗಾರರ ಒಕ್ಕೂಟಕ್ಕೆ ಚಾಲನೆ

3
Published on

ಮೈಸೂರು: ಕಾನೂನು ಚೌಕಟ್ಟಿನಲ್ಲಿ ಆಸ್ತಿ ಸೇರಿದಂತೆ ಇನ್ನಿತರ ಪತ್ರ ಬರೆಯಬೇಕಾದರೆ ಆ ಬಗ್ಗೆ ಸರಿಯಾಗಿ ತಿಳಿದುಕೊಂಡು ಬರೆಯಬೇಕು. ಮುಂದೆ ಯಾವುದೇ ಸಮಸ್ಯೆ ಬಾರದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾ ನೋಂದಣಾಧಿಕಾರಿ ವಿಜಯಲಕ್ಷ್ಮೀ ಆರ್. ಇನಾಂದಾರ್, ಪತ್ರ ಬರಹಗಾರರಿಗೆ ಸಲಹೆ ನೀಡಿದರು.

ವಿಶ್ವೇಶ್ವರನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ನಗರ ಮತ್ತು ತಾಲೂಕು ಪತ್ರ ಬರಹಗಾರರ ಒಕ್ಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರಕ್ಕೆ ಆದಾಯ ಬರುವ ನೋಂದಣಿ ಕಾರ್ಯದಲ್ಲಿ ಪತ್ರ ಬರಹಗಾರರ ಪಾತ್ರ ಮಹತ್ವದ್ದಾಗಿದೆ. ಯಾವುದೇ ಹೊಸ ಕಾನೂನು, ದಾಖಲೆ ಬಂದಾಗ ಅದರ ಬಗ್ಗೆ ಸರಿಯಾಗಿ ಅರಿತುಕೊಳ್ಳಬೇಕು. ನೀವು ಇಲಾಖೆಯ ಭಾಗವಾಗಿ ಕೆಲಸ ಮಾಡುವುದರಿಂದ ಸ್ಟ್ಯಾಂಪ್ ಡ್ಯೂಟಿ (ಶುಲ್ಕ)ದ ಬಗ್ಗೆಯೂ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಪತ್ರ ಬರಹಗಾರರು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡಬೇಕು. ನಿಮ್ಮಲ್ಲಿಗೆ ಬರುವರಿಗೆ ಕಾನೂನು ಚೌಕಟ್ಟಿನಲ್ಲಿ ಮುಂದೆ ಯಾವುದೇ ಸಮಸ್ಯೆ ಉಂಟಾಗದಂತೆ ಪತ್ರವನ್ನು ಸಿದ್ಧಪಡಿಸಿಕೊಡಬೇಕು ಎಂದರು.

ನಿಮ್ಮಲ್ಲಿ ಬಹಳ ಹಿರಿಯರು, ಕಿರಿಯರು ಇದ್ದಾರೆ. ಎಲ್ಲರಿಗೂ ನೋಂದಣಿ ಕಾರ್ಯ, ಪತ್ರ ತಯಾರಿಕೆ ಕುರಿತು ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ಹೊಸದಾಗಿ ಬರುವ ರಿಜಿಸ್ಟ್ರೇಷನ್ ರೂಲ್ಸ್ ಬಗ್ಗೆ ಮತ್ತು ಸ್ಟ್ಯಾಂಪ್ ಡ್ಯೂಟಿ ಬಗ್ಗೆ ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಮೈಸೂರು ಪೂರ್ವ ಹಿರಿಯ ಉಪ ನೋಂದಣಾಧಿಕಾರಿ ಎಚ್.ಜೆ.ನಾಗರಾಜ್, ಮೈಸೂರು ಉತ್ತರ ಹಿರಿಯ ಉಪನೋಂದಣಾಧಿಕಾರಿ ಸಿ.ಪಿ.ನಂದಿನಿ, ಮೈಸೂರು ದಕ್ಷಿಣ ಹಿರಿಯ ಉಪನೋಂದಣಾಧಿಕಾರಿ ಎಸ್.ಕೆ.ಷಾಜಹ, ಮೈಸೂರು ಪಶ್ಚಿಮ ಉಪ ನೋಂದಣಾಧಿಕಾರಿ ಎನ್.ಶ್ರೀಕಾಂತ್, ಮೈಸೂರು ದಕ್ಷಿಣ ಉಪನೋಂದಣಾಧಿಕಾರಿ ಜೆ.ಯಶಸ್ವಿನಿ, ಮುಡಾ ಉಪನೋಂದಣಾಧಿಕಾರಿ ವಿ.ರುಕ್ಮಿಣಿ, ಮುದ್ರಾಂಕ ಮತ್ತು ನೋಂದಣಿ ಇಲಾಖೆ ನೋಡಲ್ ಅಧಿಕಾರಿಗಳಾದ ಎಂ. ಸಂತೋಷ್‌ಕುಮಾರ್, ಎಂ.ವಿವೇಕ್ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಮೈಸೂರು ನಗರ ಮತ್ತು ತಾಲೂಕು ಪತ್ರ ಬರಹಗಾರರ ಒಕ್ಕೂಟದ ಅಧ್ಯಕ್ಷ ನಿಸಾರ್ ಅಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಉಪಾಧ್ಯಕ್ಷ ಎಂ.ಎಸ್. ಧನಂಜಯ್, ಕಾರ್ಯದರ್ಶಿ ಕೆ.ಆರ್.ಉದಯ್ ಕುಮಾರ್, ಖಜಾಂಚಿ ಎಂ.ಎಸ್.ನರಸಿಂಹಮೂರ್ತಿ, ಸಂಚಾಲಕ ಎಂ. ಗಣೇಶ್, ನಿರ್ದೇಶಕರಾದ ಕೆ.ಆರ್.ಸತ್ಯನಾರಾಯಣ್, ಎಸ್. ಎನ್.ದೇವರಾಜು, ಎ.ಎಸ್.ನಾಗಭೂಷಣ್ ಆರಾಧ್ಯ, ಜಿ.ಮಹದೇವ, ಬಿ.ಕುಮಾರ್, ಎಸ್. ಫಣಿರಾಜ್, ಚಂದ್ರಶೇಖರ್, ಎಸ್. ಎನ್.ದಿನೇಶ್‌ಕುಮಾರ್, ಎಸ್.ಎಸ್. ವೇಣು, ಬಿ.ಜಯಲಕ್ಷ್ಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net