

ಸೋಮವಾರಪೇಟೆ: ಶಾಲಾ ಶಿಕ್ಷಣ ಇಲಾಖೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವತಿಯಿಂದ ನಡೆಸುತ್ತಿರುವ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸಕ್ಕೆ ಬಿಇಒ ಕಚೇರಿ ಆವರಣದಲ್ಲಿ ಶಾಸಕ ಡಾ.ಮಂತರ್ ಗೌಡ ಭಾನುವಾರ ಚಾಲನೆ ನೀಡಿದರು.
ತಾಲೂಕಿನಿಂದ ಒಟ್ಟು 200 ವಿದ್ಯಾರ್ಥಿಗಳು ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದರು. ಮೈಸೂರು, ಚಿತ್ರದುರ್ಗ ಕೋಟೆ, ಹಂಪಿ, ತುಂಗಭದ್ರಾ ಡ್ಯಾಮ್, ಬೇಲೂರು ಹಳೇಬೀಡು, ಶ್ರವಣಬೆಳಗೊಳ ವೀಕ್ಷಣೆ ಮಾಡಲಿದ್ದಾರೆ ಎಂದು ಬಿಇಒ ತಿಳಿಸಿದರು.
ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿ.ಎಸ್.ಗೀತಾ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಭಾಗ್ಯಮ್ಮ, ಬಿಆರ್‌ಸಿ ಜಿ.ಎಂ.ಹೇಮಂತ್, ಶಿಕ್ಷಣ ಸಂಯೋಜಕ ಕೆ.ರಾಧಾಕೃಷ್ಣ, ಪ್ರವಾಸದ ವಿಷಯ ನಿರ್ವಾಹಕರಾದ ಪಿ.ಎಸ್.ಭುವನೇಶ್, ಜಿ.ಪಿ.ಕವಿತಾ, ವಿ.ಪ್ರೇಮಾ, ಎಂ.ಎನ್. ಚೈತ್ರಾ, ಎಸ್.ಎಚ್.ಮಂಜುನಾಥ್ ಇದ್ದರು.