ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ

30
ಮೈಸೂರು ತಾಲೂಕಿನ ಬ್ಯಾತಳ್ಳಿ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಿರುವ ಕರಪತ್ರ ಹಂಚುವ ಮೂಲಕ ಶಾಸಕ ಎಲ್.ನಾಗೇಂದ್ರ ಗ್ರಾಮ ಚಲೋ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿದರು. ಡಾ.ಲಕ್ಷ್ಮೀ ಅಶ್ವಿನ್‌ಗೌಡ, ಗೆಜ್ಜಹಳ್ಳಿ ಮಹೇಶ್, ಕವೀಶ್‌ಗೌಡ, ಗೋಪಾಲ್‌ರಾವ್, ರಾಜ್‌ಕುಮಾರ್, ಪೈ.ಟಿ.ರವಿ, ಈರಪ್ಪ ಇತರರಿದ್ದರು.
Published on

ಮೈಸೂರು: ತಾಲೂಕಿನ ಬ್ಯಾತಳ್ಳಿ ಗ್ರಾಮದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮ ಚಲೋ ಅಭಿಯಾನಕ್ಕೆ ಮಾಜಿ ಶಾಸಕ ಎಲ್.ನಾಗೇಂದ್ರ ಕೇಂದ್ರ ಸರ್ಕಾರದ ಯೋಜನೆಗಳಿರುವ ಕರಪತ್ರ ಹಂಚುವ ಮೂಲಕ ಶುಕ್ರವಾರ ಉದ್ಘಾಟಿಸಿದರು.

ರಾಜ್ಯ ಕಾರ್ಯದರ್ಶಿ ಗ್ರಾಮ ಚಲೋ ಅಭಿಯಾನದ ವಿಭಾಗ ಸಂಚಾಲಕ ಡಾ.ಲಕ್ಷೀ ಅಶ್ವಿನ್‌ಗೌಡ ಮತ್ತೊಮ್ಮೆ ಮೋದಿ ಗೋಡೆ ಬರಹಕ್ಕೆ ಚಾಲನೆ ನೀಡಿದರು. ಕ್ಷೇತ್ರದ ಅಧ್ಯಕ್ಷ ಗೆಜ್ಜಗಳ್ಳಿ ಮಹೇಶ್, ಕವೀಶ್‌ಗೌಡ, ಹಿರಿಯರಾದ ಗೋಪಾಲರಾವ್, ರಾಜ್‌ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಪೈ.ಟಿ.ರವಿ, ಈರಪ್ಪ, ನಂದೀಶ್, ಗೋಪಾಲಗೌಡ ಕಡಕೊಳ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಧುಕುಮಾರ್, ಉಪಾಧ್ಯಕ್ಷರಾದ ಹಿನಕಲ್ ಗಣೇಶ್, ಝಾನ್ಸಿರಾಣಿ, ಮಲ್ಲಿಕಾರ್ಜುನಸ್ವಾಮಿ, ಸುನೀಲ್, ಚಿಕ್ಕಾನ್ಯ ಶಿವು, ಶಿವಕುಮಾರ್ ಶ್ರೀನಿವಾಸ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net