ಸುವರ್ಣ ಮಹೋತ್ಸವ ಲಾಂಛನ ಬಿಡುಗಡೆ

logo
ಗಂಗೊಳ್ಳಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಸುವರ್ಣ ಮಹೋತ್ಸವ ಪ್ರಯುಕ್ತ ಲಾಂಛನ ಬಿಡುಗಡೆ ಸಮಾರಂಭವನ್ನು ಬಿ.ಅಪ್ಪಣ್ಣ ಹೆಗ್ಡೆ ಉದ್ಘಾಟಿಸಿದರು
Published on

ಗಂಗೊಳ್ಳಿ: ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಸುವರ್ಣ ಮಹೋತ್ಸವ ಪ್ರಯುಕ್ತ ಲಾಂಛನ ಬಿಡುಗಡೆ ಸಮಾರಂಭ ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ದೇವರಾಯ ಎಂ.ಶೇರುಗಾರ್ ಸುವರ್ಣ ಮಹೋತ್ಸವದ ಲಾಂಛನ ಬಿಡುಗಡೆ ಮಾಡಿದರು. ಉದ್ಯಮಿ ಗಣೇಶ ಕಿಣಿ ಬೆಳ್ವೆ, ಸಮಿತಿಯ ಹಿರಿಯ ಸದಸ್ಯ ಡಾ.ಕಾಶೀನಾಥ ಪೈ, ಬೆಣ್ಗೆರೆ ಶ್ರೀ ನಾಗದೇವಸ್ಥಾನದ ಕಾರ್ಯದರ್ಶಿ ಗುರುರಾಜ್ ಮೇಸ್ತ, ಗುಜ್ಜಾಡಿ-ನಾಯಕವಾಡಿ ಶ್ರೀ ಸಂಗಮೇಶ್ವರ ದೇವಸ್ಥಾನದ ಅಧ್ಯಕ್ಷ ರಘುರಾಮ ಟಿ., ಚಂದ್ರ ಖಾರ್ವಿ, ಪ್ರಧಾನ ಕಾರ್ಯದರ್ಶಿ ನಿತಿನ್ ಖಾರ್ವಿ, ಕಾರ್ಯದರ್ಶಿ ಶ್ರೀಧರ ಸಕ್ಲಾತಿ, ಮಹಿಳಾ ಸಮಿತಿ ಅಧ್ಯಕ್ಷೆ ಸವಿತಾ ಯು.ದೇವಾಡಿಗ, ಕಾರ್ಯದರ್ಶಿ ಸುಜಾತಾ ಬಾಬು ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.

ಸಮಿತಿ ಗೌರವಾಧ್ಯಕ್ಷ ಬಿ.ಲಕ್ಷ್ಮೀಕಾಂತ ಮಡಿವಾಳ ಸ್ವಾಗತಿಸಿದರು. ಪುರೋಹಿತ ಜಿ.ರಾಘವೇಂದ್ರ ನಾರಾಯಣ ಆಚಾರ್ಯ ವೇದಘೋಷ ಹಾಡಿದರು. ಅನಿತಾ ನಾಗರಾಜ ಶೇಟ್ ಪ್ರಾರ್ಥಿಸಿದರು. ಸಮಿತಿ ಅಧ್ಯಕ್ಷ ಸತೀಶ್ ಜಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಘುವೀರ ಕೆ., ನಾರಾಯಣ ಪೂಜಾರಿ, ರಾಜ್‌ಗೋಪಾಲ ಶೇರುಗಾರ್, ಗೋಪಾಲ ಖಾರ್ವಿ ದಾವನಮನೆ, ಅರುಣ್ ಕುಮಾರ್, ಸಂದೀಪ ಖಾರ್ವಿ, ಬಿ.ಪ್ರಕಾಶ ಶೆಣೈ ಅತಿಥಿಗಳನ್ನು ಗೌರವಿಸಿದರು. ಸುಂದರ ಜಿ. ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net