

ಹುಣಸೂರು : ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಮತ್ತು ಗಾರ್ನಿಯರ್ ಕಂಪನಿ ಸಹಯೋಗದಲ್ಲಿ ನಗರದ ರೋಟರಿ ಭವನದಲ್ಲಿ ಹಮ್ಮಿಕೊಂಡಿರುವ ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಹುಣಸೂರು ರೋಟರಿ ಕ್ಲಬ್ ಅಧ್ಯಕ್ಷ ರೊ.ಚನ್ನಕೇಶವ ಮಾತನಾಡಿ, ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನ ಉತ್ತಮ ಕಾರ್ಯವಾಗಿದೆ. ದೈಹಿಕ ಸೌಂದರ್ಯ ಕಾಪಾಡಿಕೊಳ್ಳುವುದು ಕೂಡ ಒಂದು ಕಲೆ. ಪುರಾಣ, ಭಾಗವತ, ರಾಮಾಯಣ, ಮಹಾಭಾರತದಲ್ಲಿ ಸೌಂದರ್ಯದ ಕುರಿತು ಪ್ರಸ್ತಾಪಿಸಲಾಗಿದೆ. ಭಾರತೀಯ ಔಷಧ ಪದ್ಧತಿಯಾದ ಆಯುರ್ವೇದ ಪದ್ಧತಿಯಲ್ಲಿ ಅಂದಿನ ಕಾಲದಲ್ಲೇ ದೈಹಿಕ, ಮಾನಸಿಕ ಸೌಂದರ್ಯ ಕಾಪಾಡಿಕೊಳ್ಳುವ ಬಗ್ಗೆ ಚಿಕಿತ್ಸೆಗಳನ್ನು ತಿಳಿಸಲಾಗಿದೆ ಎಂದರು.
ಮನೆಯ ಹಿತ್ತಲಿನಲ್ಲಿ ಬೆಳೆಯುವ ಕರಿಬೇವು, ಮೆಂತ್ಯ ಸೊಪ್ಪು, ಒಂದೆಲಗ, ಪತ್ರೆ ಮುಂತಾದ ಔಷಧೀಯ ಸಸ್ಯಗಳ ಬಳಕೆ, ಚರ್ಮಗಳ ಆರೋಗ್ಯಪೂರ್ಣ ನಿರ್ವಹಣೆ, ತಲೆಕೂದಲಿನ ಬೆಳವಣಿಗೆ ಮತ್ತು ನಿರ್ವಹಣೆ ಕುರಿತು ಪೂರ್ವಜರು ಮಾಹಿತಿ ನೀಡಿದ್ದಾರೆ. ಬ್ಯೂಟೀಷಿಯನ್ ಕೋರ್ಸ್ ಕೌಶಲ ಕಲೆಯ ಪ್ರಮುಖ ಅಂಗವಾಗಿದೆ. ಬಹಳಷ್ಟು ಯುವಕ ಯುವತಿಯರ ಜೀವನಾಧಾರವಾಗಿದೆ ಎಂದರು.
ರೋಟರಿ ಇನ್ನರ್‌ವ್ಹೀಲ್ ಅಧ್ಯಕ್ಷೆ ಸ್ಮಿತಾ ದಯಾನಂದ್, ರೋಟರಿ ವಿದ್ಯಾಸಂಸ್ಥೆ ಮುಖ್ಯಶಿಕ್ಷಕಿ ದೀಪಾ, ಶಿಕ್ಷಕ ಪ್ರಸನ್ನ, ಶರ್ಮಿಳಾ ಇತರರು ಹಾಜರಿದ್ದರು. ಇದೇ ವೇಳೆ ಹಲವರು ಹೇರ್ ಕಲರಿಂಗ್ ಮಾಡಿಸಿಕೊಂಡರು.