

ಶೃಂಗೇರಿ: ನರೇಗಾ ಯೋಜನೆಯಡಿ ಗ್ರಾಮೀಣ ಜನರಿಗೆ ನಿರಂತರ ಕೆಲಸ ಒದಗಿಸುವ ನಿಟ್ಟಿನಲ್ಲಿ ಮೇ ಅಂತ್ಯದ ತನಕ ವಲಸೆ ಯಾಕ್ರಿ…ನಿಮ್ಮೂರಿನಲ್ಲಿ ಉದ್ಯೋಗ ಖಾತ್ರಿ ಎಂಬ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದೆ.
ತಾಲೂಕಿನ ಒಂಭತ್ತು ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಪಂ ಅಧಿಕಾರಿಗಳು ಹಾಗೂ ತಾಲೂಕು ಐಇಸಿ ಸಂಯೋಜಕರು, ಡಾಟಾ ಎಂಟ್ರಿ ಅಪರೇಟರ್‌ಗಳು ಮನೆ ಮನೆಗೆ ತೆರಳಿ ಕರಪತ್ರಗಳನ್ನು ಹಂಚಿ ಕೃಷಿ ಹೊಂಡ, ಕೃಷಿಬಾವಿ ಹಾಗೂ ತೋಟಗಾರಿಕೆ, ಕೃಷಿ,ದನದ ಕೊಟ್ಟಗೆ, ಕೋಳಿ ಶೆಡ್, ಕುರಿ ಶೆಡ್, ಇಂಗುಗುಂಡಿ ಕಾಮಗಾರಿಗಳನ್ನು ಮಾಡಬಹುದಾಗಿದೆ. ಕೂಲಿ ದರವನ್ನು 316 ರಿಂದ 349ಕ್ಕೆ ಹೆಚ್ಚಿಸಲಾಗಿದೆ. ಮೇ ವರೆಗೆ ಅಭಿಯಾನ ನಡೆಯಲಿದೆ. ಕೂಲಿ ಕಾರ್ಮಿಕರು ದೂರದ ಪ್ರದೇಶಗಳಿಗೆ ಗುಳೆ ಹೋಗುವುದಕ್ಕೆ ಕಡಿವಾಣ ಹಾಕಲು ನರೇಗಾ ಯೋಜನೆಯಡಿ ಹೆಚ್ಚು ಕೆಲಸ ನೀಡಲಾಗುತ್ತಿದೆ. ಸ್ವ ಸಹಾಯ ಸಂಘಗಳ ಸದಸ್ಯರು ಈ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದರು.