ದುಡಿಯೋಣ ಬಾ ಅಭಿಯಾನ ಶುರು

16 lxr 1
Published on

ಲಕ್ಷೆ್ಮೕಶ್ವರ: ಗ್ರಾಮೀಣ ಪ್ರದೇಶದ ಜನರು ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಪ್ಪಿಸಲು ಮತ್ತು ಗ್ರಾಮೀಣ ಭಾಗದ ಜನರ ಸ್ವಾವಲಂಬಿ ಬದುಕಿಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ‘ದುಡಿಯೋಣ ಬಾ’ ಅಭಿಯಾನ ಜಾರಿಗೊಳಿಸಿದೆ.

ಮಾ. 15 ರಿಂದ ಅಭಿಯಾನ ಆರಮಭವಾಗಿದ್ದು ಜೂನ್ 15ರವರೆಗೆ ಮುಂದು ವರಿಯಲಿದೆ. ತಾಲೂಕಿನ ಶಿಗ್ಲಿ, ಆದರಹಳ್ಳಿ, ದೊಡ್ಡೂರ, ಉಡೇನಹಳ್ಳಿ, ಶ್ಯಾಬಳ, ಯಲ್ಲಾಪುರ, ಮಾಢಳ್ಳಿ, ಕೊಂಡಿಕೊಪ್ಪ, ಸೋಗಿಹಾಳ, ಗೋವನಾಳ ಗ್ರಾಪಂ ವ್ಯಾಪ್ತಿಯಲ್ಲಿ ಬದು ನಿರ್ಮಾಣ ಕಾರ್ಯ ಪ್ರಾರಂಭಗೊಂಡಿದ್ದು ನೂರಾರು ಕೂಲಿ ಕಾರ್ವಿುಕರು ಪಾಲ್ಗೊಂಡಿದ್ದಾರೆ. ದುಡಿಯೋಣ ಬಾ ಅಭಿಯಾನ ಯಶಸ್ವಿಗಾಗಿ ಎಲ್ಲ ಪಿಡಿಒ, ಸಿಬ್ಬಂದಿ, ಅಂಗನವಾಡಿ, ಆಶಾ- ಕಾರ್ಯಕರ್ತರು, ರೈತ ಮತ್ತು ಯುವಕ ಸಂಘಟನೆಗಳ ಸದಸ್ಯರನ್ನು ಕ್ರಿಯಾಶೀಲ ರನ್ನಾಗಿಸ ಲಾಗುವುದು. ಕಾಯಕ ಬಂಧುಗಳಿಗೆ ಈ ಬಗ್ಗೆ ಸೂಕ್ತ ತರಬೇತಿ ನೀಡಲಾಗುತ್ತದೆ. ಪ್ರತಿ ಕುಟುಂಬಕ್ಕೆ 100 ದಿನ ಉದ್ಯೋಗ ಕಲ್ಪಿಸಲಾಗುತ್ತದೆ. 90 ದಿನ ಕೆಲಸ ಮಾಡಿದಲ್ಲಿ ಸುಮಾರು 25 ಸಾವಿರ ರೂಪಾಯಿ ಕೂಲಿ ಹಣ ಕೈ ಸೇರಲಿದೆ. ಸ್ಥಳೀಯವಾಗಿ ರೈತರಿಗೆ ಅನುಕೂಲ, ಸಂಪನ್ಮೂಲ ಕ್ರೋಡೀಕರಣವಾದಂತಾಗುತ್ತದೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net