ಬೆಂಗಳೂರಿನ ರಾಮಕೃಷ್ಣ ಮಠದಲ್ಲಿ ಪುಸ್ತಕ ಪ್ರದರ್ಶನಕ್ಕೆ ಚಾಲನೆ

book fair
Published on

ಬೆಂಗಳೂರು: ನಗರದ ರಾಮಕೃಷ್ಣ ಮಠದಲ್ಲಿ ಆಯೋಜಿಸಿರುವ ವಿಶೇಷ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಮಠದ ಮುಖ್ಯಸ್ಥ ಸ್ವಾಮಿ ನಿತ್ಯಸ್ಥಾನಂದಜೀ ಅವರು ಶನಿವಾರ ಚಾಲನೆ ನೀಡಿದರು.

ಪುಸ್ತಕ ಮೇಳದಲ್ಲಿ ಶ್ರೀ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ ಹಾಗೂ ವೇದಾಂತ ಸಾಹಿತ್ಯ, ಧ್ಯಾನ-ಯೋಗದ ಕುರಿತಾದ ಗ್ರಂಥಗಳು, ವ್ಯಕ್ತಿತ್ವ ವಿಕಸನ, ಚಾರಿತ್ರ್ಯ ನಿರ್ಮಾನ ಕುರಿತ ಪುಸ್ತಕಗಳು, ಮಕ್ಕಳಿಗೆ ರಾಮಾಯಣ, ಮಹಾಭಾರತ, ಪುರಾಣ ಕಥೆಗಳ ಚಿತ್ರಕಥೆಗಳ ಪುಸಕ್ತಗಳು ಸೇರಿ ಹಲವಾರು ಕೃತಿಗಳು ಲಭ್ಯವಿದೆ. ವಿವಿಧ ಪುಸ್ತಕಗಳಿಗೆ ಶೇ.10ರಿಂದ 50ರವರೆಗೆ ವಿಶೇಷ ರಿಯಾಯಿತಿ ಸೌಲಭ್ಯ ನೀಡಿದ್ದು, ಮೇಳವು 2025ರ ಜ.15ರವರೆಗೆ ನಡೆಯಲಿದೆ ಎಂದು ಮಠದ ಮುಖ್ಯಸ್ಥರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net