ಕೂಡಿಗೆಯಲ್ಲಿ ಭಾರತ್ ಒನ್ ಕೇಂದ್ರ ಆರಂಭ

Launch of Bharat One Center at Kudige
Published on

ಕುಶಾಲನಗರ:

ಸಮೀಪದ ಕೂಡಿಗೆ ಗ್ರಾಮದಲ್ಲಿ ಭಾರತ್ ಒನ್ ಜನ ಸಂಪರ್ಕ ಕೇಂದ್ರಕ್ಕೆ ಕೂಡಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಟಿ. ಗಿರೀಶ್ ಕುಮಾರ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಭಾರತ್ ಒನ್ ಜನ ಸಂಪರ್ಕ ಕೇಂದ್ರದ ಮೂಲಕ ರಾಜ್ಯ ಮತ್ತು ಕೇಂದ್ರದ ಸರ್ಕಾರದ ವಿವಿಧ ಸೇವಾ ಯೋಜನೆ, ಸೌಲಭ್ಯಗಳ ಮಾಹಿತಿ ಪಡೆಯಲು, ಮತ್ತು ಹೊಸ ಹೊಸ ಯೋಜನೆಯ ಸವಲತ್ತುಗಳನ್ನು ಪಡೆಯಲು ಒಂದೇ ಸೂರಿನ ಅಡಿಯಲ್ಲಿ ಗ್ರಾಮೀಣ ಪ್ರದೇಶಗಳ ಜನರಿಗೆ ಅನುಕೂಲವಾಗುವುದರಿಂದ, ಮತ್ತು ಸಮಗ್ರವಾದ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೇಂದ್ರದ ಪ್ರಯೋಜನವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಭಾರತ್ ಒನ್ ಜನ ಸಂಪರ್ಕ ಕೇಂದ್ರದ ಅಧಿಕಾರಿ ಎನ್. ಯು. ದೇವದತ್ತ್, ಗಿರೀಶ್ ಕುಮಾರ್, ಹೆಚ್.ಎಸ್. ದೇವರಾಜ್, ಎಚ್.ಎಚ್. ಶೋಭಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net