ಶ್ರೀಶಾ ಸೊಸೈಟಿಯ ವತಿಯಿಂದ ಅಪಘಾತ ವಿಮೆ ಯೋಜನೆಗೆ ಚಾಲನೆ

mng_11 jul vime
ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ವತಿಯಿಂದ ಸಮಗ್ರ ರಕ್ಷಣಾ ಯೋಜನೆ ಅಪಘಾತ ವಿಮೆ ಅಭಿಯಾನಕ್ಕೆ ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿ ನಿಯಮಿತ ಬೆಂಗಳೂರು ಇದರ ಅಧ್ಯಕ್ಷ ಜಿ.ನಂಜನಗೌಡ ಚಾಲನೆ ನೀಡಿದರು.
Published on

ಮಂಗಳೂರು: ಸಮಾಜಮುಖಿ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ವತಿಯಿಂದ ತನ್ನ ಗ್ರಾಹಕರಿಗಾಗಿ ಸಮಗ್ರ ರಕ್ಷಣಾ ಯೋಜನೆ ಅಪಘಾತ ವಿಮೆ ಅಭಿಯಾನಕ್ಕೆ ಹಂಪನಕಟ್ಟೆ ಶಾಖೆಯಲ್ಲಿ ಚಾಲನೆ ನೀಡಲಾಯಿತು.

ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗ ಹಾಗೂ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಇವುಗಳ ಸಹಯೋಗದೊಂದಿಗೆ ಇಂದು ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿ ನಿಯಮಿತ ಬೆಂಗಳೂರು ಇದರ ಅಧ್ಯಕ್ಷ ಜಿ.ನಂಜನಗೌಡ ಅವರು ಅಭಿಯಾನಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಜಿ.ನಂಜನಗೌಡ ಅವರು, ಶ್ರೀಶಾ ಸೊಸೈಟಿಯು ತನ್ನ ಗ್ರಾಹಕರಿಗೆ ನೀಡುತ್ತಿರುವ ಈ ಅಪಘಾತ ವಿಮಾ ಯೋಜನೆ ಗ್ರಾಹಕರಿಗೆ ಅತ್ಯಂತ ಅವಶ್ಯಕವಾಗಿದ್ದು, ಅತೀ ಕಡಿಮೆ ಪ್ರೀಮಿಯಂ ಜೊತೆಗೆ ಅನೇಕ ಸವಲತ್ತುಗಳನ್ನು ಒಳಗೊಂಡಿದೆ. ಶ್ರೀಶಾ ಸೊಸೈಟಿಯು ಈ ರೀತಿಯ ಅನೇಕ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಮಾದರಿಯಾಗಿದೆ. ಈ ವಿಮಾ ಯೋಜನೆಯನ್ನು ರಾಜ್ಯದ ಸೌಹಾರ್ದ ಸಹಕಾರಿಗಳಿಗೆ ಪರಿಚಯಿಸುವುದಾಗಿ ಹೇಳಿದರು.

ಸಮಗ್ರ ರಕ್ಷಣಾ ಯೋಜನೆ ಅಪಘಾತ ವಿಮೆ

ಅಂಚೆ ಕಚೇರಿಯಲ್ಲಿ ದೊರೆಯುವ ಸಮಗ್ರ ರಕ್ಷಣಾ ಯೋಜನೆ ಅಪಘಾತ ವಿಮೆಯಂತೆ ಕೇವಲ ರೂ.749ಗೆ 15 ಲಕ್ಷಗಳ ಎಲ್ಲಾ ರೀತಿಯ ಅಪಘಾತಗಳಿಗೆ ವಿಮೆ ಯೋಜನೆಯಾಗಿದೆ. ಅಪಘಾತದಲ್ಲಿ ಸಾವು ಸಂಭವಿಸಿದರೆ ಅಥವಾ ಶಾಶ್ವತ ಭಾಗಶಃ ಅಥವಾ ಸಂಪೂರ್ಣ ವೈಕಲ್ಯಕ್ಕೆ 15 ಲಕ್ಷ ರೂ, ಒಳರೋಗಿ ವೆಚ್ಚ 60000 ರೂ, ಆಕಸ್ಮಿಕ ಆಸ್ಪತ್ರೆ ನಗದು 10 ದಿನಗಳವರೆಗೆ ದಿನಕ್ಕೆ 1000 ರೂ.ನಂತೆ 10000, ಹೊರರೋಗಿ ವೆಚ್ಚ ರೂ.30000 ವರೆಗೆ, ಅಂತಿಮ ಸಂಸ್ಕಾರಕ್ಕೆ ರೂ.5000 ರೂ. ನೀಡುವ ಸಮಗ್ರ ರಕ್ಷಣಾ ಯೋಜನೆ ಈ ವಿಮೆಯ ವ್ಯಾಪ್ತಿಯಲ್ಲಿದೆ.

ಮಂಗಳೂರು ವಿಭಾಗದ ಹಿರಿಯ ಸೂಪರಿಂಟೆಂಡೆಂಟ್ ಆಫ್ ಪೋಸ್ಟ್ ಆಫೀಸಸ್ ಎಂ.ಸುಧಾಕರ್ ಮಲ್ಯ, ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿ ನಿಯಮಿತ ಬೆಂಗಳೂರು ಇದರ ನಿರ್ದೇಶಕರಾದ ಭಾರತಿ ಎಂ ಭಟ್ ಇದ್ದರು.

ಶ್ರೀಶಾ ಸೊಸೈಟಿಯ ಅಧ್ಯಕ್ಷ ಎಂ.ಎಸ್.ಗುರುರಾಜ್ ಸ್ವಾಗತಿಸಿದರು. ಸೊಸೈಟಿಯ ನಿರ್ದೇಶಕ ಪ್ರಸನ್ನ ಕುಮಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net