ಪುತ್ತೂರಿನ ಆಳ್ವಾ ನಂದಿನಿ ಸೆಂಟರ್‌ನಲ್ಲಿ ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ

ನಂದಿನಿ
ದಕ್ಷಿಣ ಕನ್ನಡ ಹಾಲು ಒಕ್ಕೂಟದ ಸಹಯೋಗದಲ್ಲಿ ರೈತರ ಏಳಿಗೆಗಾಗಿ, ಕಾರ್ಮಿಕರ ಕಲ್ಯಾಣಕ್ಕಾಗಿ ಮತ್ತು ಗ್ರಾಹಕರ ಸಂತೃಪ್ತಿಗಾಗಿ ನಂದಿನಿ ಸಿಹಿ ಉತ್ಸವ ಆಚರಿಸಲಾಗುತ್ತಿದ್ದು, ಬುಧವಾರ ಪುತ್ತೂರು ಪುರಸಭೆ ವಾಣಿಜ್ಯ ಸಂಕೀರ್ಣದ ಆಳ್ವಾ ನಂದಿನಿ ಸೆಂಟರ್‌ನಲ್ಲಿ ನಂದಿನಿ ಅಧಿಕೃತ ಡೀಲರುಗಳಾದ ಕೃಷ್ಣ ಪ್ರಸಾದ್ ಆಳ್ವಾ ಮತ್ತು ಶಂಕರ್ ಅವರು ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ ನೀಡಿದರು.
Published on

ಪುತ್ತೂರು: ದಕ್ಷಿಣ ಕನ್ನಡ ಹಾಲು ಒಕ್ಕೂಟದ ಸಹಯೋಗದಲ್ಲಿ ರೈತರ ಏಳಿಗೆಗಾಗಿ, ಕಾರ್ಮಿಕರ ಕಲ್ಯಾಣಕ್ಕಾಗಿ ಮತ್ತು ಗ್ರಾಹಕರ ಸಂತೃಪ್ತಿಗಾಗಿ ನಂದಿನಿ ಸಿಹಿ ಉತ್ಸವವನ್ನು ಪ್ರತಿ ವರ್ಷ ಎರಡು ಬಾರಿ ಒಕ್ಕೂಟದ ವ್ಯಾಪ್ತಿಯಲ್ಲಿ ಆಚರಿಸಲಾಗುತ್ತಿದ್ದು, ಬುಧವಾರ ಪುತ್ತೂರು ಪುರಸಭೆ ವಾಣಿಜ್ಯ ಸಂಕೀರ್ಣದ ಆಳ್ವಾ ನಂದಿನಿ ಸೆಂಟರ್‌ನಲ್ಲಿ ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ನಂದಿನಿ ಅಧಿಕೃತ ಡೀಲರುಗಳಾದ ಕೃಷ್ಣ ಪ್ರಸಾದ್ ಆಳ್ವಾ ಮತ್ತು ಶಂಕರ್ ಅವರು ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ ನೀಡಿದರು. ರೈತರ ಏಳಿಗೆಗಾಗಿ, ಕಾರ್ಮಿಕರ ಕಲ್ಯಾಣಕ್ಕಾಗಿ ಮತ್ತು ಗ್ರಾಹಕರ ಸಂತೃಪ್ತಿಗಾಗಿ ನಂದಿನಿ ಸಿಹಿ ಉತ್ಸವವನ್ನು ಪ್ರತಿ ವರ್ಷ ಎರಡು ಬಾರಿ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಆಚರಿಸಲಾಗುತ್ತಿದ್ದು. ಈ ಬಾರಿ 77ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಂದಿನಿ ಸಿಹಿ ಉತ್ಸವವನ್ನು ಪ್ರಾರಂಭಿಸುತ್ತಿದ್ದು, ಮುಂದಿನ ಸೆಪ್ಟಂಬರ್ 20 ರವರೆಗೆ ಈ ನಂದಿನಿ ಸಿಹಿ ಉತ್ಸವ ಮಂದುವರಿಯಲಿದೆ. ನಂದಿನಿ ಸಿಹಿ ಉತ್ಪನ್ನಗಳ ಮೇಲೆ ಶೇಕಡಾ 20ರ ರಿಯಾಯಿತಿ ದೊರಕಲಿದ್ದು, ಗ್ರಾಹಕರು ಇದರ ಸಂಪೂರ್ಣ ಉಪಯೋಗವನ್ನು ಪಡೆದು ತನ್ಮೂಲಕ ಹೈನುಗಾರರ ಅಭಿವೃದ್ಧಿಗೆ ಸಹಕರಿಸುವಂತೆ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net