

ಜಮಖಂಡಿ: ನಗೆ ನಾಟಕಗಳ ಮೂಲಕವೇ ನಾಡಿನಾದ್ಯಂತ ಖ್ಯಾತಿ ಪಡೆದಿರುವ ಹುಬ್ಬಳ್ಳಿಯ ಗುರು ಇನ್‌ಸ್ಟಿಟ್ಯೂಟ್ ತಂಡ ಅ. 4 ರಂದು ನಗರದ ಬಸವ ಭವನದಲ್ಲಿ ‘ಸೂಪರ್ ಸಂಸಾರ’ ಅದ್ಭುತ ನಗೆ ನಾಟಕ ಪ್ರದರ್ಶಿಸಲಿದೆ.
ಗಂಗಾವತಿ ರೇಷ್ಮೆ ರಂಗೋತ್ಸವ ಎಂಬ ಶೀರ್ಷಿಕೆಯಡಿ, ಹುಬ್ಬಳ್ಳಿಯ ಗಂಗಾವತಿ ಸಿಲ್ಕ್ ಪ್ಯಾಲೇಸ್ ಸಹಯೋಗದಲ್ಲಿ ಪ್ರದರ್ಶನ ಅಯೋಜನೆಗೊಂಡಿದ್ದು, ಮರಾಠಿಯ ಖ್ಯಾತ ನಾಟಕಕಾರ ಸಂತೋಷ ಪವಾರ ಅವರ ಸೂಪರ್ ಸಂಸಾರ ನಾಟಕವನ್ನು ಡಾ.ಯಶವಂತ ಸರದೇಶಪಾಂಡೆ ಕನ್ನಡಕ್ಕೆ ಅನುವಾದಿಸಿ, ನಿರ್ದೇಶಿಸಿದ್ದಾರೆ.
ಆಲ್ ದಿ ಬೆಸ್ಟ್ ರಾಶಿಚಕ್ರ, ಹಿಂಗಾದ್ರ. ಕಾಮಿಡಿ, ಒಂದಾಟ ಭಟ್ರದು ಸೇರಿ ಹಲವು ನಗೆ ನಾಟಕಗಳನ್ನು ನಾಡಿನಾದ್ಯಂತ ಮತ್ತು ಹೊರದೇಶದಲ್ಲಿ ಸೇರಿ 5 ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡಿದ ಹೆಮ್ಮೆ ಈ ತಂಡದ್ದು.
ನಾಟಕದ ಕೊನೆಗೆ ಅದೃಷ್ಟವಂತ ಪ್ರೇಕ್ಷಕರಿಗೆ ಸಾವಿರಾರು ರೂಪಾಯಿ ಬೆಲೆಯ ಸಿಲ್ಕ್ ಸೀರೆ ಉಡುಗೊರೆಯಾಗಿ ನೀಡಲಾಗುವುದು. ಜತೆಗೆ ರಂಗಭೂಮಿಯಲ್ಲಿ ತೊಡಗಿಸಿಕೊಂಡು ಅನುಪಮ ಸೇವೆ ಸಲ್ಲಿಸಿದ ಸ್ಥಳೀಯ ರಂಗಕರ್ಮಿಗಳನ್ನು, ಗಣ್ಯರನ್ನು ಸನ್ಮಾನಿಸಲಾಗುವದು.
ಜಮಖಂಡಿಯ ಶ್ರೀ ಪ್ರಗತಿ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಸಹಯೋಗದಲ್ಲಿ ನಾಟಕಗಳು ಪ್ರದರ್ಶಗೊಳ್ಳಲಿವೆ. ಆಸಕ್ತರು ಆನಂದ (97404 06059) ಅವರನ್ನು ಸಂಪರ್ಕಿಸಬಹುದು.
ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿ, ನಾಟಕಗಳನ್ನು ವೀಕ್ಷಿಸಿ, ಆನಂದಿಸಬೇಕೆಂದು ಸಂಸ್ಥೆ ಮುಖ್ಯಸ್ಥ ಡಾ. ಯಶವಂತ ಸರದೇಶಪಾಂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.