ನಗುವಿನಿಂದ ಆರೋಗ್ಯ ವೃದ್ಧಿ

Screenshot_20240403-203726_1-1.jpg
Published on

ಹುಬ್ಬಳ್ಳಿ: ನಗು ಎಂಬ ದಿವ್ಯ ಔಷಧಿಯು ದೇಹ ಹಾಗೂ ಮನಸ್ಸಿಗೆ ಆರೋಗ್ಯ ನೀಡುತ್ತದೆ. ನಗುವ ಸನ್ನಿವೇಶಗಳಲ್ಲಿ ನಕ್ಕು ಮನಸ್ಸು ಹಗುರ ಮಾಡಿಕೊಳ್ಳಬೇಕು ಎಂದು ಹಿರಿಯ ವೈದ್ಯ ಹಾಗೂ ಸಿದ್ಧಾರೂಢ ಮಠ ಸೇವಾ ಟ್ರಸ್ಟ್ ಧರ್ಮದರ್ಶಿ ಡಾ. ಗೋವಿಂದ ಮಣ್ಣೂರು ಹೇಳಿದರು.

ಧಾರವಾಡ ಜಿಲ್ಲಾ ನ್ಯಾಶನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಶನ್ ವತಿಯಿಂದ ಇಲ್ಲಿಯ ಕೇಶ್ವಾಪುರ ಖಾನಜಿ ಸಭಾಗೃಹದಲ್ಲಿ ಆಯೋಜಿಸಿದ್ದ ಚೈತ್ರನಗು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಗುವಿನಲ್ಲಿ ಅಪಹಾಸ್ಯಗಳಿರಬಾರದು. ಅದು ಸಂಬಂಧಗಳನ್ನು ಒಡೆಯುತ್ತದೆ. ನಗು ಪರಸ್ಪರನ್ನು ಒಂದು ಗೂಡಿಸಬೇಕು ಎಂಬುದನ್ನು ಹಾಸ್ಯ ಕವಿತೆಗಳ ಮೂಲಕ ತಿಳಿಸಿದರು.

ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಕಿತ್ತೂರು ಕರ್ನಾಟಕ ಸಂಚಾಲಕ ಜನಮೇಜಯ ಉಮ್ಮಜಿರ್ ಮಾತನಾಡಿ, ಹಾಸ್ಯದ ಮನೋಭಾವ ಹೊಂದಿರುವವರು ಹೆಚ್ಚು ಆಯುಷ್ಯವಂತರಾಗಿರುತ್ತಾರೆ ಎಂದು ಹೇಳಿದರು.

ಎಸ್.ಕೆ. ಮಾಲಿಪಾಟೀಲ, ಸುಶೀಲೇಂದ್ರಾಚಾರ್ಯ ಕುಂದರಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಮೆಡಿಕಲ್ ಅಸೋಶಿಯೇಶನ್ ಅಧ್ಯಕ್ಷ ಡಾ. ಪ್ರದೀಪ ದೇಸಾಯಿ ಮಾತನಾಡಿದರು.

ಮಹೇಂದ್ರ ರೋಣಿಮಠ, ಭಾರದ್ವಾಡ, ಗುರುನಾಥ ಕಂಠಿ, ಆರ್.ಆರ್. ಜೋಶಿ, ಸಂಕಾಳ, ಬಡಿಗೇರ, ವಿಶ್ವಾಸ ಕುಲಕರ್ಣಿ, ತ್ಯಾಗರಾಜ, ಕುರ್ತಕೋಟಿ, ವಿ.ಆರ್ ಪಾಟೀಲ, ಪ್ರಣಿತಾ ಪಾಟೀಲ, ಪ್ರಿಯದಶಿರ್ನಿ ಕಲಾಲ, ಉಪಾಧ್ಯಾಯ, ಪ್ರಕಾಶ ಗುಂಜಾಳ, ಡಾ. ಉಮೇಶ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net