

ಶಿವಮೊಗ್ಗ: ಪೊಲೀಸರಿಗೆ ಲಾಠಿ ಮತ್ತು ಗನ್‌ಗಳನ್ನು ಸರ್ಕಾರ ಕೊಡುವುದು ಬರೀ ಶೋಕಿಗಲ್ಲ. ಅದನ್ನು ಸಂದರ್ಭ ಬಂದಾಗ ಉಪಯೋಗ ಮಾಡಬೇಕು. ಅಶಾಂತಿ ಉಂಟು ಮಾಡುವವರಿಗೆ ಲಾಠಿ, ಗನ್ ರುಚಿ ತೋರಿಸಬೇಕು ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.
ಗುರುವಾರ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ, ಎಸ್ಪಿ ಇಬ್ಬರೂ ದಕ್ಷರಾಗಿದ್ದಾರೆ. ಪ್ರಧಾನಿಗೆ ಇರುವಷ್ಟೇ ಅಧಿಕಾರ ಜಿಲ್ಲಾಧಿಕಾರಿಗೂ ಇರುತ್ತದೆ. ಗಲಭೆ ಸಂದರ್ಭಗಳಲ್ಲಿ ಜಿಲ್ಲಾಧಿಕಾರಿಗಳು ಎಸ್ಪಿಗೆ ಆದೇಶಿಸಬೇಕಿತ್ತು ಎಂದರು.
ಲಾಠಿ, ಗನ್‌ಗಳನ್ನು ಸಮಯ ಸಂದರ್ಭ ನೋಡಿ ಉಪಯೋಗಿಸಬೇಕಿತ್ತು. ಅವುಗಳನ್ನು ಬಳಸಿಕೊಂಡು ಕಾನೂನು ಸುವ್ಯವಸ್ಥೆ ಕಾಪಾಡಬೇಕಿತು. ದೂರು-ಪ್ರತಿದೂರು ದಾಖಲಿಸಲು ಮಾತ್ರ ಐಪಿಸಿ ಸೆಕ್ಷನ್ ಇಲ್ಲ. ಅದನ್ನು ಈ ಇಬ್ಬರು ಅಧಿಕಾರಿಗಳು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ಎಲ್ಲ ಜಾತಿ ಜನಾಂಗದವರಿಗೆ ರಕ್ಷಣೆ ನೀಡಬೇಕು ಎಂದರು.