ಲಾಠಿ ಚಾರ್ಜ್ ಪ್ರಕರಣದ ಅರ್ಜಿ ವಿಚಾರಣೆ ಫೆ. 24ಕ್ಕೆ ಮುಂದೂಡಿಕೆ

web 66
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಬೆಳಗಾವಿ ಸುವರ್ಣ ಸೌಧದಲ್ಲಿ ಡಿ. 10ರಂದು ನಡೆಯುತ್ತಿದ್ದ ಅಽವೇಶನದ ಸಂದರ್ಭದಲ್ಲಿ ಪಂಚಮಸಾಲಿ ಹೋರಾಟಗಾರರ ಮೇಲಿನ ಲಾಠಿ ಚಾರ್ಜ್ ಪ್ರಕರಣದ ಅರ್ಜಿ ವಿಚಾರಣೆಯನ್ನು ಧಾರವಾಡ ಹೈಕೋರ್ಟ್  ಫೆ. 24ಕ್ಕೆ ಮುಂದೂಡಿದೆ.

ಬೆಳಗಾವಿಯಲ್ಲಿ ನಡೆದ ಲಾಠಿ ಚಾರ್ಜ್ ಪ್ರಕರಣದ ವಿಡಿಯೋ ಹಾಗೂ ಫೋಟೋಗಳನ್ನು ಒದಗಿಸುವಂತೆ ನ್ಯಾಯಪೀಠ ಸೂಚಿಸಿತ್ತು. ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಪರ ಹಾಗೂ ಸರ್ಕಾರದ ಪರ ವಕೀಲರು ವಿಡಿಯೋ ಹಾಗೂ ಫೋಟೋಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದ್ದಾರೆ.

ಸರ್ಕಾರದ ಪರ ಗಂಗಾಧರ ಹಾಗೂ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಪರ ಪೂಜಾ ಸವದತ್ತಿ ವಾದ ಮಂಡಿಸಿದರು. ಪ್ರಕರಣಕ್ಕೆ ಸಂಬ೦ಧಿಸಿ ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಬೆಳಗಾವಿಯಲ್ಲಿ ಉದ್ದೇಶಪೂರ್ವಕವಾಗಿ ಲಾಠಿ ಚಾರ್ಜ್ ಮಾಡಿಸಿಲ್ಲ. ಹೋರಾಟಗಾರರ ಮನವೊಲಿಸಲು ಸ್ವತಃ ಎಡಿಜಿಪಿಯವರು ನಾಲ್ವರು ಸಚಿವರನ್ನು ಸ್ಥಳಕ್ಕೆ ಕರೆಸಿದ್ದರು. ಆದರೂ ಹೋರಾಟಗಾರರು ಮಾತು ಕೇಳಲಿಲ್ಲ. ಇದಕ್ಕೆ ಸಂಬ೦ಧಿಸಿದ ವಿಡಿಯೋ ಇದ್ದು ನ್ಯಾಯಪೀಠ ಅವುಗಳನ್ನು ಪರಿಶೀಲಿಸಬೇಕು ಎಂದು ಸರ್ಕಾರದ ಪರ ವಕೀಲ ಗಂಗಾಧರ ವಾದ ಮಂಡಿಸಿದರು.

ಪ್ರತಿವಾದ ಮಂಡಿಸಿದ ಜಯಮೃತ್ಯುಂಜಯ ಸ್ವಾಮೀಜಿ ಪರ ವಕೀಲರಾದ ಪೂಜಾ ಸವದತ್ತಿ, ಎಡಿಜಿಪಿಯವರೇ ಲಾಠಿ ಹಿಡಿದು ಲಾಠಿ ಚಾರ್ಜ್ ಮಾಡಿಸಿದ್ದಾರೆ. ಜನದಟ್ಟನೆ ಇದ್ದ ಸ್ಥಳದಲ್ಲಿ ಏಕಾಏಕಿ ಲಾಠಿ ಚಾರ್ಜ್ ಮಾಡಿದ್ದರಿಂದ ಗಲಾಟೆ ಉಂಟಾಯಿತು. ಇದರ ವಿಡಿಯೋ ಇದ್ದು, ಅದನ್ನು ನ್ಯಾಯಪೀಠ ಪರಿಶೀಲಿಸಬೇಕು ಎಂದು ಕೋರಿದರು.

ಇಬ್ಬರೂ ವಕೀಲರಿಂದ ವಿಡಿಯೋ ಸಾಕ್ಷ÷್ಯಗಳನ್ನು ಪಡೆದಿರುವ ನ್ಯಾಯಪೀಠವು ಪ್ರಕರಣದ ವಿಚಾರಣಯನ್ನು  ಫೆ. 24ಕ್ಕೆ ಮುಂದೂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net