ಲಾಠಿ ಚಳವಳಿ ನಡೆಸಿದ ಕನ್ನಡ ಪರ ಸಂಘಟನೆಗಳು

Published on

ಚಾಮರಾಜನಗರ: ತಮಿಳುನಾಡಿನ ತೀರ್ಥಕ್ಷೇತ್ರಗಳಿಗೆ ತೆರಳುವ ಕನ್ನಡಿಗರ ಮೇಲೆ ಅಲ್ಲಿನ ಕೆಲ ಪುಂಡರು ವಿನಾಕಾರಣ ನಡೆಸುತ್ತಿರುವ ಹಲ್ಲೆ ನಗರದಲ್ಲಿ ಕನ್ನಡಪರ ಸಂಘಟನೆಗಳು ಲಾಠಿ ಚಳವಳಿ ನಡೆಸಿದರು.

ನಗರದ ಶ್ರೀ ಚಾಮರಾಜೇಶ್ವರ ದೇಗುಲದಿಂದ ಲಾಠಿ ಹಿಡಿದು ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿದ‌ ಪ್ರತಿಭಟನಾಕಾರರು ರಾಷ್ಟ್ರೀಯ‌ ಹೆದ್ದಾರಿ ತಡೆದು ತಮಿಳುನಾಡು ವಿರುದ್ಧ ಘೋಷಣೆ ಕೂಗಿದರು.

ತಮಿಳರು ಕನ್ನಡಿಗರನ್ನು ಕೆಣಕುವುದು, ವಾಹನಕ್ಕೆ ಹಾಕಿದ ಕನ್ನಡ ಬಾವುಟ ತೆಗೆಯುವಂತೆ ಹೇಳಿದರೆ ತಮಿಳುನಾಡಿನ ವಾಹನಗಳು ರಾಜ್ಯ ಪ್ರವೇಶ ಮಾಡದಂತೆ ಗಡಿಯನ್ನು ಬಂದ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕನ್ನಡಪರ ಹೋರಾಟಗಾರರಾದ ಚಾ.ರಂ.ಶ್ರೀನಿವಾಸಗೌಡ, ಶಾ.ಮುರುಳಿ‌ ಇತರರಿದ್ದರು.

ಅಲ್ಲಿನ ಕೆಲವರು ಪುಂಡಾಟ ನಡಸಿದರೂ ಅಲ್ಲಿನ ಸರ್ಕಾರವಾಗಲಿ ನಮ್ಮ ಸರ್ಕಾರವಾಗಲಿ ಕ್ರಮ ವಹಿಸದಿರುವುದು ವಿಪರ್ಯಾಸ, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ತಮಿಳುನಾಡಿನ ಸರ್ಕಾರವನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net