ನಟ ಧಿರೇಂದ್ರ ಗೋಪಾಲ್ ಪತ್ನಿ ನಿಧನ

Dhirendra Gopal Wife
Published on

ಹರಿಹರ: ನಗರದ ಜೆ.ಸಿ.ಬಡಾವಣೆ ವಾಸಿ, ಖ್ಯಾತ ಹಾಸ್ಯ ನಟ ದಿವಂಗತ ಧಿರೇಂದ್ರ ಗೋಪಾಲ್ ಅವರ ಪತ್ನಿ ಡಿ.ಜಿ.ಸುನಂದಮ್ಮ (68) ಬುಧವಾರ ಬೆಳಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು.

ಕಳೆದ ಎರಡು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಅವರು ವೈದ್ಯರಿಂದ ಚಿಕಿತ್ಸೆ ಪಡೆದು ಮನೆಗೆ ಆಗಮಿಸಿದ್ದರು. ಬುಧವಾರ ಬೆಳಗ್ಗೆ ಸುಸ್ತಾಗಿದೆ ಎಂದು ಸರ್ಕಾರಿ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

20 ವರ್ಷಗಳ ಹಿಂದೆ ಪತಿ ಧಿರೇಂದ್ರ ಗೋಪಾಲ್ ಅವರ ನಿಧನದ ಬಳಿಕ ಹರಿಹರದ ಮನೆಯಲ್ಲಿ ಇಬ್ಬರು ಮಕ್ಕಳು, ಸೊಸೆಯೊಂದಿರು, ಮೊಮ್ಮಕ್ಕಳೊಂದಿಗೆ ವಾಸವಿದ್ದರು. ಪುತ್ರರಾದ ನರೇಂದ್ರ, ಸುಧೀಂದ್ರ, ಪುತ್ರಿ ವಿದ್ಯಾವತಿ ಇದ್ದಾರೆ. ನಗರದ ದಾಲ್ಮಿಯಾಘಾಟ್​ನಲ್ಲಿ ಸಂಜೆ 6.30ಕ್ಕೆ ಅಂತ್ಯಕ್ರಿಯೆ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net