

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ರಂಗಾಯಣದಲ್ಲಿ ಮಂಗಳವಾರ ರಂಗಭೂಮಿ ಕಲಾವಿದ ಹಾಗೂ ಧಾರವಾಡ ರಂಗಾಯಣ ನಿರ್ದೇಶಕರಾಗಿದ್ದ ಡಾ. ರಾಜು ತಾಳಿಕೋಟಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿತ್ತು.
ಮಂಗಳವಾರ ಬೆಳಗ್ಗೆ ಮಂಗಳೂರಿನಿ0ದ ಪಾರ್ಥಿವ ಶರೀರ ತರಲಾಯಿತು. ಚಿತ್ರನಟ ಶೈನ್ ಶೆಟ್ಟಿ ಹಾಗೂ ತಂಡ ಮಂಗಳೂರಿನಿ0ದ ಜತೆಗೇ ಆಗಮಿಸಿತ್ತು.
ಹು- ಧಾ ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ, ಜಿಲ್ಲಾಧಿಕಾರಿ ದಿವ್ಯ ಪ್ರಭು ಮತ್ತು ಜಿ.ಪಂ. ಸಿಇಒ ಭುವನೇಶ ಪಾಟೀಲ ಪುಷ್ಪನಮನ ಸಲ್ಲಿಸಿ ಸರ್ಕಾರಿ ಗೌರವ ಅರ್ಪಿಸಿದರು.
ರಂಗಭೂಮಿ ಕಲಾವಿದರು, ಸಾಹಿತಿಗಳು, ಅಭಿಮಾನಿಗಳು ಹಾಗೂ ಸಾಂಸ್ಕೃತಿಕ ಕ್ಷೇತ್ರದ ಅನೇಕ ಗಣ್ಯರು ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರ, ಧಾರವಾಡ ರಂಗಾಯಣದ ಆಡಳಿಽತಾಕಾರಿ ಶಶಿಕಲಾ ಹುಡೇದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಹಾಗೂ ರಂಗಾಯಣದ ಸಿಬ್ಬಂದಿ ಪುಷ್ಪನಮನ ಸಲ್ಲಿಸಿದರು.
ಡಾ. ರಾಜು ತಾಳಿಕೋಟಿ ಅವರ ಪತ್ನಿ, ಮಕ್ಕಳು ಹಾಗೂ ಸಂಬ0ಧಿಕರ ಗೋಳಾಟ ಕರುಳು ಕಿವುಚುವಂತಿತ್ತು. ಸಾಹಿತಿಗಳು, ರಂಗಭೂಮಿಯ ಹಿರಿ- ಕಿರಿಯ ಕಲಾವಿದರು ದುಃಖ ತೋಡಿಕೊಂಡರು. ರಂಗಾಯಣದ ರೆಪರ್ಟರಿ ಕಲಾವಿದರು ರಂಗಗೀತೆಗಳ ಮೂಲಕ ಅಗಲಿದ ಗುರುವಿಗೆ ಅಂತಿಮ ವಿದಾಯ ಹೇಳಿದರು.