ಮೈಸೂರಿನ ಮಂಡಹಳ್ಳಿ ವಿಮಾನ ನಿಲ್ದಾಣದಲ್ಲಿ ಪೈಲೆಟ್ ಕಣ್ಣಿಗೆ ಲೇಸರ್ ಲೈಟ್ ; ಕಿಡಿಗೇಡಿಗಳಿಂದ ಕೃತ್ಯ

airport-696x392
Published on

ಮೈಸೂರು : ಕಿಡಿಗೇಡಿಗಳು ವಿಮಾನದ ಪೈಲೆಟ್ ಕಣ್ಣಿಗೆ ಲೇಸರ್ ಲೈಟ್ ಬಿಡುತ್ತಿದ್ದು, ಮೈಸೂರಿನ ಮಂಡಕಹಳ್ಳಿ ವಿಮಾನ ನಿಲ್ದಾಣದಲ್ಲಿ ಗಂಭೀರ ಸಮಸ್ಯೆ ಎದುರಾಗಿದೆ.

ವಿಮಾನ ಲ್ಯಾಂಡಿಂಗ್ ಹಾಗೂ ಟೇಕಾಫ್ ಆಗುವ ವೇಳೆ ಪೈಲೆಟ್‌ಗಳಿಗೆ ತೊಂದರೆ ಆಗುವಂತೆ ಲೇಸರ್ ಲೈಟ್ ಬಿಡುತ್ತಿದ್ದಾರೆ. ಸಂಜೆ ಹೊತ್ತು ಚೆನ್ನೈಗೆ ತೆರಳುವ ವಿಮಾನದ ಲ್ಯಾಂಡಿಂಗ್ ಹಾಗೂ ಟೇಕಾಫ್ ಸಮಯದಲ್ಲಿ ಕಿರಿಕಿರಿಯಾಗುತ್ತಿದೆ. ಸುಮಾರು ಒಂದು ತಿಂಗಳು ಇಂತಹ ಕಹಿ ಅನುಭವ ಆಗಿದೆ. ಮರಸೆ ಹಾಗೂ ಮಂಡಕಳ್ಳಿ ಗ್ರಾಮಗಳ ದಿಕ್ಕಿನಿಂದ ಲೇಸರ್ ಲೈಟ್ ಬರುತ್ತಿದೆ. ಈ ಬಗ್ಗೆ ಪೈಲೆಟ್‌ಗಳು ಹಿರಿಯ ಅಧಿಕಾರಿಗಳು ಹಾಗೂ ಮೈಸೂರು ಪೊಲೀಸರಿಗೆ ಮಾಹಿತಿ ನೀಡಿ, ಕಿರುಕುಳ ತಪ್ಪಿಸುವಂತೆ ಮನವಿ ಮಾಡಿದ್ದಾರೆ.

ಈ ಸಂಬಂಧ ಸಾಂದರ್ಭಿಕ ಫೋಟೋ ಸಮೇತ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿ, ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net