ಗಿರಿ ಜಿಲ್ಲೆಯಲ್ಲಿ ಕರೊನಾ ಮಹಾಸ್ಫೋಟ

yadgiri
Published on

ಯಾದಗಿರಿ: ಮೊದಲ ಬಾರಿಗೆ ಯಾದಗಿರಿ ಜಿಲ್ಲೆಯಲ್ಲಿ ಕರೊನಾ ಮಹಾಸ್ಫೋಟ ಸಂಭವಿಸಿದೆ. ಅಮವಾಸ್ಯೆ ಮರುದಿನವೇ ಈ ಮಹಾಮಾರಿ
ಭಾರಿ ಪ್ರಮಾಣದಲ್ಲಿ ಎಂಟ್ರಿ ಕೊಟ್ಟು ಇಡೀ ರಾಜ್ಯವನ್ನೇ ಬೆಚ್ಚಿಬೀಳುವಂತೆ ಮಾಡಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸೋಂಕಿತರ ಪಟ್ಟಿ ಹೊರ ಬಿದ್ದಿದ್ದು ಶನಿವಾರ ಶನಿ ಕರೊನಾ ರೂಪದಲ್ಲಿ ವಕ್ಕರಿಸಿದಂತಾಗಿದೆ. ಒಂದೇ ದಿನದಲ್ಲಿ ಇಷ್ಟೊಂದು ಪ್ರಕರಣಗಳು ಇದುವರೆಗೆ ಯಾವುದೇ ಜಿಲ್ಲೆಗಳಲ್ಲಿ ದಾಖಲಾಗಿಲ್ಲ.

ಮೊದಲು ಗ್ರೀನ್ ಪಟ್ಟಿಯಲ್ಲಿದ್ದ ಯಾದಗಿರಿ ಜಿಲ್ಲೆಗೆ ಅಹ್ಮದಾಬಾದಿನಿಂದ ಇಬ್ಬರು ಕರೊನಾ ಸೋಂಕು ಹಚ್ಚಿಕೊಂಡು ಬರುವ ಮೂಲಕ ಜಿಲ್ಲೆಗೆ ಕಳಂಕವನ್ನು ಹಚ್ಚಿದರು. ಕ್ರಮೇಣ ಕರೊನಾ ಸೋಂಕಿತರ ಜಿಲ್ಲೆಗಳ ಪಟ್ಟಿಯಲ್ಲಿ ಈ ಪುಟ್ಟ ಜಿಲ್ಲೆಯೂ ದೊಡ್ಡ ಪ್ರಮಾಣದಲ್ಲಿಯೇ ಎಂಟ್ರಿ ಕೊಟ್ಟಿತು. ಇಂದು ವರದಿಯಾದ ಎಲ್ಲ 72 ಪ್ರಕರಣಗಳೂ ಮಹಾರಾಷ್ಟ್ರಕ್ಕೆ ದುಡಿಯಲೆಂದು ಹೋಗಿ ಮರಳಿ ಬಂದವರೇ ಆಗಿರುವುದು ವಿಶೇಷ. ಇವರೆಲ್ಲರನ್ನೂ ಕೋವಿಡ್-19 ಆಸ್ಪತ್ರೆಗೆ ಸೇರಿಸಲಾಗಿದೆ. ಹೀಗಾಗಿ ಆಸ್ಪತ್ರೆಯಲ್ಲಿ ಸ್ಥಳದ ಅಭಾವ ಕಂಡು ಬಂದರೂ ಅಚ್ಚರಿಪಡಬೇಕಾಗಿಲ್ಲ.

ಮಹಾರಾಷ್ಟ್ರದಿಂದ ಬಂದವರನ್ನು ಕ್ವಾರಂಟೈನ್ ಕೇಂದ್ರಗಳಲ್ಲಿಡಲಾಗಿತ್ತು. ನಂತರ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಆ ಪೈಕಿ 72 ಜನರಿಗೆ ಸೋಂಕು ಇರುವುದು ದೃಢಪಟ್ಟಿತು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇಂದು ಸೋಂಕಿತರಾಗಿರುವವರ ಪಟ್ಟಿಯಲ್ಲಿ 34 ಮಹಿಳೆಯರು ಮತ್ತು 37ಪುರುಷರು ಸೇರಿ ಒಟ್ಟು 72 ಪ್ರಕರಣಗಳಾಗಿವೆ. ಈ ಪಟ್ಟಿಯಲ್ಲಿ ಒಂದು ವರ್ಷದ ಒಂದು ಮಗು ಮತ್ತು ಎರಡು ವರ್ಷಗಳ ಇಬ್ಬರು ಮಕ್ಕಳು ಸೇರಿ 17 ಮಕ್ಕಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಬಹುತೇಕ ಒಂದೊಂದು ಕುಟುಂಗಳಲ್ಲಿ ಇಬ್ಬರು ಇಲ್ಲವೇ ಮೂವರು ಅಥವಾ ಅದಕ್ಕಿಂತಲೂ ಹೆಚ್ಚು ಜನಕ್ಕೆ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆಯಾದರೂ ವಿವರಗಳು ಲಭ್ಯವಾಗಬೇಕಾಗಿದೆ.

ಜಿಲ್ಲೆಯಲ್ಲಿ ಸಧ್ಯ 15 ಪ್ರಕರಣಗಳು ಸಕ್ರೀಯವಾಗಿದ್ದವು. ಶನಿವಾರದ ಪ್ರಕರಣಗಳೂ ಸೇರಿ ಒಟ್ಟು ಸಂಖ್ಯೆ 87ಕ್ಕೆ ಏರಿದಂತಾಗಿದೆ. ವಿಶೇಷವೆಂದರೆ ಮಹಾರಾಷ್ಟ್ರಕ್ಕೆ ಕೂಲಿ ಮತ್ತಿತರ ಕೆಲಸಗಳಿಗೆ ದುಡಿಯಲೆಂದು ಹೋಗಿ ಮರಳಿ ಬಂದವರಿಗೆ ಸೋಂಕು ತಗುಲಿದೆ. ಮುಂಬೈನಿಂದ ಮರಳಿ ಬಂದಿದ್ದವರನ್ನೆಲ್ಲ ಜಿಲ್ಲೆಯ ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿರಿಸಲಾಗಿದ್ದು, ಅವರಲ್ಲಿ 85 ಜನಕ್ಕೆ ಕರೊನ ಸೋಂಕು ತಗುಲಿರುವುದು ವರದಿಯಾಗಿದೆ.

ಈ 72 ಪ್ರಕರಣಗಳಲ್ಲಿ 16 ಸಣ್ಣ ಮಕ್ಕಳಿಗೆ ಪಾಸಿಟಿವ್ ಪತ್ತೆಯಾಗಿರುವುದು ಮತ್ತಷ್ಟು ಆತಂಕ ಪಡುವಂತಾಗಿದೆ. ಒಂದು ವರ್ಷದ (ಪಿ.1756) ಹೆಣ್ಣು ಮಗು, 2 ವರ್ಷದ (ಪಿ.1855), (ಪಿ.1874), ಹೆಣ್ಣು ಮಕ್ಕಳು, 6 ವರ್ಷದ (ಪಿ.1881) ಹೆಣ್ಣು ಮಗು, 8 ವರ್ಷದ (ಪಿ.1750) ಬಾಲಕ, 10 ವರ್ಷದ (1751) ಬಾಲಕಿ, 11 ವರ್ಷದ (ಪಿ.1753) ಬಾಲಕ, 6 ವರ್ಷದ (ಪಿ.1755) ಬಾಲಕಿ, 8 ವರ್ಷದ (ಪಿ.1762) ಬಾಲಕಿ, 10 ವರ್ಷದ (ಪಿ.1885) ಬಾಲಕಿ, 9 ವರ್ಷದ (ಪಿ.1903) ಬಾಲಕಿ, 7 ವರ್ಷದ (ಪಿ.1904) ಬಾಲಕನಲ್ಲಿ ಸೋಂಕು ಕಂಡು ಬಂದಿದೆ.

ಅಲ್ಲದೆ 30 ವರ್ಷದ ಪುರುಷ (ಪಿ.1761), 20 ವರ್ಷದ ಯುವತಿ (1853), 35 ವರ್ಷದ ಮಹಿಳೆ (ಪಿ.1854), 40 ವರ್ಷದ ಪುರುಷ (1856), 40 ವರ್ಷದ ಮಹಿಳೆ (ಪಿ.1857), 25 ವರ್ಷದ ಯುವಕ (ಪಿ.1858), 18 ವರ್ಷದ ಇಬ್ಬರು ಯುವತಿಯರು (ಪಿ.1859), (ಪಿ.1860), 18 ವರ್ಷದ ಯುವಕ (1861), 17 ವರ್ಷದ ಹದಿಹರೆಯದ ಯುವತಿ (1862), 14 ವರ್ಷದ ಬಾಲಕ(1863), 40 ವರ್ಷದ ಮಹಿಳೆ (ಪಿ.1864), 25 ವರ್ಷದ ಯುವಕ (ಪಿ.1865), 48 ವರ್ಷದ ಮಹಿಳೆ (1866), 27 ವರ್ಷದ ಯುವಕ (1867), 31 ವರ್ಷದ ಪುರುಷ (1868), 32 ವರ್ಷದ ಯುವತಿ (ಪಿ 1749), 28 ವರ್ಷದ ಯುವತಿ (ಪಿ.1752) 30 ವರ್ಷದ ಯುವತಿ (ಪಿ1754), 30 ವರ್ಷದ ಯುವತಿ (ಪಿ.1757), 38 ವರ್ಷದ ಪುರುಷ (ಪಿ.1758), 30 ವರ್ಷದ ಯುವತಿ (ಪಿ. 1759), 23 ವರ್ಷದ ಯುವಕ (ಪಿ.17560), 27 ವರ್ಷದ ಯುವಕ (1869), 28 ವರ್ಷದ ಯುವಕ (1871), 26 ವರ್ಷದ ಯುವತಿ (ಪಿ. 1872), 47 ವರ್ಷದ ಪುರುಷ (ಪಿ.1873), 35 ವರ್ಷದ ಪುರುಷ (ಪಿ.1875), 24 ವರ್ಷದ ಯುವಕ (ಪಿ.1876), 21 ವರ್ಷದ ಯುವತಿ (ಪಿ. 1877) 28 ವರ್ಷದ ಯುವಕ (ಪಿ.1878), 39 ವರ್ಷದ ಮಹಿಳೆ (ಪಿ.1873), 23 ವರ್ಷದ ಯುವಕ (1822), 23 ವರ್ಷದ ಯುವಕ (1883) 24 ವರ್ಷದ ಯುವತಿ (ಪಿ.1884), 26 ವರ್ಷದ ಯುವಕ (ಪಿ.1886), 19 ವರ್ಷದ ಯುವಕ (ಪಿ.1887), 44 ವರ್ಷದ ಪುರುಷ (ಪಿ.1888), 17 ವರ್ಷದ ಬಾಲಕ (ಪಿ.1889), 15 ವರ್ಷದ ಬಾಲಕ (1890), 26 ವರ್ಷದ ಯುವಕ (ಪಿ.1891), 18 ವರ್ಷದ ಯುವಕ, (ಪಿ.1892), 20 ವರ್ಷದ ಯುವತಿ (ಪಿ.1893), 54 ವರ್ಷದ ಪುರುಷ (ಪಿ 1894), 48 ವರ್ಷದ ಮಹಿಳೆ(ಪಿ.1895), 26 ವರ್ಷದ ಯುವತಿ (1896), 21 ವರ್ಷದ ಯುವತಿ (1897), 38 ವರ್ಷದ ಮಹಿಳೆ (ಪಿ.1898), 17 ವರ್ಷದ ಬಾಲಕ(ಪಿ.1899), 55 ವರ್ಷದ ಪುರುಷ (ಪಿ.1900), 44 ವರ್ಷದ ಮಹಿಳೆ (ಪಿ.1901), 32 ವರ್ಷದ ಪುರುಷ (ಪಿ. 1902), 25 ವರ್ಷದ ಯುವಕ (ಪಿ.1905), 31 ವರ್ಷದ ಪುರುಷ (ಪಿ.1906), 21ವರ್ಷದ ಯುವತಿ (ಪಿ.1907), 32ವರ್ಷದ ಮಹಿಳೆ (1908) 17 ವರ್ಷದ ಬಾಲಕಿ (ಪಿ.1909), 15 ವರ್ಷದ ಬಾಲಕಿ (ಪಿ 1910) ಎಂದು ಗುರುತಿಸಲಾಗಿದೆ.

72 ಸೋಂಕಿತರಲ್ಲಿ 36 ಜನ ಪುರುಷ ಹಾಗೂ 36 ಜನ ಮಹಿಳೆಯರು ಇದ್ದಾರೆ. ಇವರನ್ನೆಲ್ಲ ಯಾದಗಿರಿಯ ಕೋವಿಡ್-19 ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೂಮರ್ಾರಾವ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net