ಲ್ಯಾಪ್‌ಟಾಪ್, ಮೊಬೈಲ್ಗಳು ಬೆಂಕಿಗಾಹುತಿ

16BTP01
ಬೆಟ್ಟದಪುರದ ಮುಖ್ಯ ರಸ್ತೆಯಲ್ಲಿರುವ ಎಸ್‌ಎಸ್ ಮೊಬೈಲ್ ಜೋನ್ ಅಂಗಡಿಯಲ್ಲಿ ವಸ್ತುಗಳು ಸುಟ್ಟು ಕರಕಲಾಗಿರುವುದು.
Published on

ಬೆಟ್ಟದಪುರ: ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಎಸ್‌ಎಸ್ ಮೊಬೈಲ್ ಜೋನ್ ಅಂಗಡಿಯಲ್ಲಿ ಶನಿವಾರ ರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ವಸ್ತುಗಳೆಲ್ಲ ಸುಟ್ಟು ಭಸ್ಮವಾಗಿದೆ.

ಗ್ರಾಮದ ನಿವಾಸಿ ಸಂದೇಶ್ ಅವರಿಗೆ ಸೇರಿದ ಮೊಬೈಲ್ ಅಂಗಡಿ ಇದಾಗಿದ್ದು, ಎಂದಿನಂತೆ ರಾತ್ರಿ 9:30 ವರೆಗೂ ಕೆಲಸ ಮಾಡಿ ನಂತರ ಮನೆಗೆ ಹೋದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

ಘಟನೆಯಂದಾಗಿ ಅಂಗಡಿಯಲ್ಲಿದ್ದ ಲ್ಯಾಪ್‌ಟಾಪ್, ಬೆಲೆಬಾಳುವ ಮೊಬೈಲ್, ಮೊಬೈಲ್ ಉಪಕರಣ, ಪೀಠೋಪಕರಣ ಮತ್ತು ಯುಪಿಎಸ್ ಬೆಂಕಿಹಾತಿಯಾಗಿದೆ. ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ತಡರಾತ್ರಿಯಲ್ಲಿ ಆಗಮಿಸಿ ಅಕ್ಕಪಕ್ಕ ಅಂಗಡಿಗಳಿಗೆ ತೊಂದರೆಯಾಗದಂತೆ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net