ಪಿಜಿಯಲ್ಲಿ ಲ್ಯಾಪ್‌ಟಾಪ್ ಕಳ್ಳತನ

THEFT
Published on

ಮೈಸೂರು: ನಗರದ ವಿಜಯಶ್ರೀಪುರದಲ್ಲಿರುವ ಪಿ.ಜಿ.ಒಂದರ ರೂಮ್‌ಗೆ ನುಗ್ಗಿದ ಕಳ್ಳರು, ವಿದ್ಯಾರ್ಥಿಯ ಲ್ಯಾಪ್‌ಟಾಪ್ ಕಳವು ಮಾಡಿದ್ದಾರೆ.

ಟಿ.ಆರ್.ಕಾರ್ತಿಕ್ ಅವರು ಸ್ನಾನ ಮಾಡಲು ಹೊರಹೋಗಿದ್ದ ವೇಳೆ ಕೊಠಡಿಗೆ ನುಗ್ಗಿರುವ ಕಳ್ಳರು ಕೃತ್ಯ ಎಸಗಿದ್ದಾರೆ.

ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net