ಮೈಸೂರಿನಲ್ಲಿ ಲ್ಯಾಪ್‌ಟಾಪ್ ಕಳವು

THEFT
Published on

ಮೈಸೂರು: ನಗರದ ಸಾಫ್ಟ್‌ವೇರ್ ಕಂಪನಿಯೊಂದರ ಸಾಫ್ಟ್‌ವೇರ್ ಇಂಜಿನಿಯರ್‌ನ ಎರಡು ಲ್ಯಾಪ್‌ಟಾಪ್ ಹಾಗೂ ದಾಖಲೆಗಳು ಕಳುವಾಗಿದೆ.

ಹೆಬ್ಬಾಳ್ 2ನೇ ಹಂತದ ನಿವಾಸಿ, ನಗರದ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಜಸ್ತಾನ ಮೂಲದ ಇಂಜಿನಿಯರ್ ಪ್ರಖರ ಭಟ್ಟ ಎಂಬವರೇ ಲ್ಯಾಪ್‌ಟಾಪ್ ಹಾಗೂ ದಾಖಲೆಗಳನ್ನು ಕಳೆದುಕೊಂಡವರು. ಪಿಜಿಯೊಂದರಲ್ಲಿರುವ ಇವರು ಜು.29 ರಂದು ರಾತ್ರಿ 2 ರವರೆಗೆ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡಿ ಬಾಗಿಲು ಹಾಕದೆ ಮಲಗಿದರು.

ಈ ವೇಳೆ ಪಿಜಿಗೆ ನುಗ್ಗಿದ ಕಳ್ಳ ಎರಡು ಲ್ಯಾಪ್‌ಟಾಪ್, ಆಧಾರ್, ಪಾನ್ ಕಾರ್ಡ್, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಅನ್ನು ಕಳವು ಮಾಡಿದ್ದಾನೆ. ಕಳವು ಮಾಡುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಆ.3 ರಂದು ಪ್ರಖರ ಭಟ್ಟ ಹೆಬ್ಬಾಳ ಠಾಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net