

ಮೂಲ್ಕಿ: ಮೂಲ್ಕಿ ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಸಂದರ್ಭ ಮೂಲ್ಕಿ ಲಯನ್ಸ್ ಕ್ಲಬ್, ಬಪ್ಪನಾಡು ಲಯನ್ಸ್ ಕ್ಲಬ್ ಇನ್ಸ್ಪೈರ್ ಅವರ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಅಂಗವಾಗಿ ಬಪ್ಪನಾಡು ಲಯನ್ಸ್ ಕ್ಲಬ್ ವತಿಯಿಂದ ಪರಿಸರದ ವಿದ್ಯಾರ್ಥಿನಿಯ ಉನ್ನತ ವ್ಯಾಸಂಗಕ್ಕಾಗಿ ಲ್ಯಾಪ್ ಟಾಪ್ ಹಸ್ತಾಂತರಿಸಲಾಯಿತು.
ಲಯನ್ಸ್ ಜಿಲ್ಲಾ ಗವರ್ನರ್ ಭಾರತೀ ಬಿ.ಎಂ., ಮಾಜಿ ಗವರ್ನರ್ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಪ್ರಾಂತ್ಯ ಅಧ್ಯಕ್ಷರಾದ ಸುಜಿತ್ ಸಾಲಿಯನ್, ವೆಂಕಟೇಶ ಹೆಬ್ಬಾರ್, ಉಭಯ ಕ್ಲಬ್ ಅಧ್ಯಕ್ಷರಾದ ರೋಲಿ ಡಿಕೋಸ್ಟ, ಬಿ.ಶಿವಪ್ರಸಾದ್, ಶೀತಲ್ ಸುಶೀಲ್, ಗೀತಾ ರಾವ್, ಉದಯ ಆಮಿನ್, ಸುಶೀಲ್, ಸುಧೀರ್ ಬಾಳಿಗ, ಸಂತೋಷ್, ಪ್ರತಿಭಾ ಹೆಬ್ಬಾರ್, ಅನಿಲ್ ಕುಮಾರ್, ಕಲ್ಲಪ್ಪ ತಡವಲಗ, ಭಾಸ್ಕರ್ ಕಾಂಚನ್, ಪ್ರಣವ್ ಶರ್ಮ, ಅಶ್ವಿನಿ, ಜಿಲ್ಲಾ ಲಿಯೋ ಅಧ್ಯಕ್ಷೆ ಸಮೀಕ್ಷಾ ರೇಹ ಮೊದಲಾದವರು ಉಪಸ್ಥಿತರಿದ್ದರು.