

ಹಳೆಯಂಗಡಿ: ಶಿಕ್ಷಣಕ್ಕೆ ಸಹಾಯ ನೀಡುವ ಮೂಲಕ ಪ್ರಾದೇಶಿಕ ಅಭಿವೃದ್ಧಿಗೆ ಬುನಾದಿಯಾಗಿರುವ ಸೇವಾ ಸಂಸ್ಥೆಗಳ ಕಾರ್ಯ ಅಭಿನಂದನೀಯ ಎಂದು ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಸಸಿಹಿತ್ಲು ಕದಿಕೆ ಮೊಗವೀರ ಮಹಾಸಭಾದ ಅಂಗಸಂಸ್ಥೆ ಮುಂಬೈ ಕದಿಕೆ ಮೊಗವೀರ ಸಭಾ ಹಾಗೂ ಕದಿಕೆ ವಿದ್ಯಾಪ್ರಸಾರಕ ಸಂಘದ ವತಿಯಿಂದ 2025ರ ಶೈಕ್ಷಣಿಕ ಚಟುವಟಿಕೆ ಪ್ರೋತ್ಸಾಹ ನೀಡುವ ಅಂಗವಾಗಿ ಮುಂಬೈ ಉದ್ಯಮಿ ವೇದ್ ಪ್ರಕಾಶ್ ಶ್ರೀಯಾನ್ ಪ್ರಾಯೋಜಕತ್ವದಲ್ಲಿ ಗ್ರಾಮದಲ್ಲಿ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಹಾಗೂ ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ರೀಡಾ ಕ್ಷೇತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ ಯತೀಶ್ ಕುಮಾರ್ ಸಸಿಹಿತ್ಲು ಹಾಗೂ ಸಿನಿಮಾ ಕ್ಷೇತ್ರದಲ್ಲಿ ಸಾಧನೆಗೈದ ಸುಮನ್ ಮೆಂಡನ್ ಅವರನ್ನು ಸನ್ಮಾನಿಸಲಾಯಿತು.
ಗಿರೀಶ್ ಶ್ರೀಯಾನ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಶಾಸಕ ಉಮಾನಾಥ ಎ.ಕೋಟ್ಯಾನ್, ಉದ್ಯಮಿ ಜೈ ಕೃಷ್ಣ ಕೋಟ್ಯಾನ್, ಮುಂಬೈ ಸಭಾದ ಅಧ್ಯಕ್ಷ ಅಶೋಕ್ ಪುತ್ರನ್, ಗಣೇಶ್ ಕುಂದರ್, ಕಿಶೋರ್ ಗುರಿಕಾರ, ನಟರಾಜ್ ಗುರಿಕಾರ, ಪ್ರಭಾಕರ್ ಪೂಜಾರಿ, ಹರೀಶ್ ಪೂಜಾರಿ, ದಿನೇಶ್ ಪೂಜಾರಿ, ಆನಂದ್ ಪೂಜಾರಿ, ಮಹಿಳಾ ಸಭಾ ಅಧ್ಯಕ್ಷೆ ಸವಿತಾ ಉದಯ್ ಸಾಲ್ಯಾನ್, ಮಂದಿರದ ಅಧ್ಯಕ್ಷ ಪ್ರೇಮನಾಥ್ ಸುವರ್ಣ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಶೋಭೆಂದ್ರ ಸಾಲ್ಯಾನ್ ಸ್ವಾಗತಿಸಿದರು. ಅನಿಲ್ ಕುಂದರ್ ವಂದಿಸಿದರು. ಉಪಾಧ್ಯಕ್ಷ ವಿನೋದ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಹಾಗೂ ಕದಿಕೆ ಮೊಗವೀರ ಸಭಾದ ಸದಸ್ಯರು ಭಾಗವಹಿಸಿದ್ದರು.