

ಬಂಟ್ವಾಳ: ತಾಲೂಕಿನ ಗ್ರಾಮಾಡಳಿತಾಧಿಕಾರಿಗಳಿಗೆ ಸರ್ಕಾರ ಒದಗಿಸಿದ ಕ್ರೋಮ್ ಬುಕ್(ಲ್ಯಾಪ್‌ಟಾಪ್)ಗಳನ್ನು ಮಂಗಳವಾರ ಬಂಟ್ವಾಳ ಶಾಸಕ ರಾಜೇಶ್ ನೈಾಕ್ ಉಳಿಪ್ಪಾಡಿಗುತ್ತು ವಿತರಿಸಿದರು.
ಬಳಿಕ ಮಾತನಾಡಿ, ಜನರ ನಿರೀಕ್ಷೆಗಳಿಗೆ ತಕ್ಕಂತೆ ಯಾವುದೇ ದೂರುಗಳು ನನ್ನವರೆಗೆ ಬಾರದಂತೆ ಕೆಲಸ ನಿರ್ವಹಿಸಿ. ಅಧಿಕಾರಿಗಳ ಜನಪರ ಕಾರ್ಯದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಒಟ್ಟು 21 ಮಂದಿ ಗ್ರಾಮ ಆಡಳಿತ ಅಧಿಕಾರಿಗಳ ಪೈಕಿ 15 ಗ್ರಾಮ ಆಡಳಿತ ಅಧಿಕಾರಿಗಳಿಗೆ ಈ ದಿನ ಹಂಚಿಕೆ ಮಾಡಲಾಗಿದ್ದು, ಬಾಕಿ ಉಳಿದವರಿಗೆ ಸರ್ಕಾರದಿಂದ ಲ್ಯಾಪ್‌ಟಾಪ್ ಒದಗಿಸಲು ಮುಂಬರುವ ಅಧಿವೇಶನದಲ್ಲಿ ಆಗ್ರಹಿಸಲಾಗುವುದು ಎಂದರು.
ತಹಸೀಲ್ದಾರ್ ಡಿ.ಅರ್ಚನಾ ಭಟ್, ಉಪತಹಸೀಲ್ದಾರ್‌ಗಳಾದ ರಾಜೇಶ್ ನಾಯ್ಕ, ನವೀನ್ ಬೆಂಜನಪದವು, ಕಂದಾಯ ನಿರೀಕ್ಷಕರಾದ ಜನಾರ್ದನ ಜೆ., ವಿಜಯ್, ರವಿ, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಅನಿಲ್ ಕೆ.ಪೂಜಾರಿ, ಗೌರವಾಧ್ಯಕ್ಷ ಪ್ರವೀಣ್ ಕುಮಾರ್, ಕಾರ್ಯದರ್ಶಿ ಪ್ರಶಾಂತ್, ಖಜಾಂಚಿ ವೈಶಾಲಿ ಮೊದಲಾದವರಿದ್ದರು.