

ಸೂಲಿಬೆಲೆ: ಹೊಸಕೋಟೆ ತಾಲೂಕು ಕಂಬಳಿಪುರ ಸರ್ಕಾರಿ ಪ್ರಾಥಮಿಕ ಶಾಲೆಗೆ ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು ಭರಪೂರ ಕೊಡುಗೆ ನೀಡಿದರು.
ಅಮ್ಮಶಕ್ತಿಪೀಠದ ಧರ್ಮಾಧಿಕಾರಿ ಕೆ.ರಾಮಯ್ಯ ಲ್ಯಾಪ್‌ಟಾಪ್, ಟ್ರಾಕ್‌ಸೂಟ್, ವಾಟರ್ ಫಿಲ್ಟರ್, ಪುಸ್ತಕಗಳನ್ನು ನೀಡಿದರು, ಕೆ.ಸಿ.ಮುನಿರಾಜು ಮತ್ತು ಮಂಜಣ್ಣ ಮಕ್ಕಳಿಗೆ ಪ್ರಶಸ್ತಿ ವಿತರಣೆ ಮಾಡಿದರು. ರೈಲ್ವೆ ಇಲಾಖೆಯ ಗೋವಿಂದಪ್ಪ ಪ್ರೋತ್ಸಾಹಧನ, ಕೆನರಾ ಬ್ಯಾಂಕ್‌ನಿಂದ ವಿದ್ಯಾರ್ಥಿವೇತನ ವಿತರಣೆ, ಹಳೇ ವಿದ್ಯಾರ್ಥಿ ವಸಿಷ್ಟ ಮಕ್ಕಳಿಗೆ ತಟ್ಟೆ ಲೋಟ ವಿತರಣೆ ಮಾಡಿದರು, ಅರವಿಂದ್,ಮನೋಹರ್ ಹಿರಿಯರನ್ನು ಸನ್ಮಾನಿಸಿದರು.
ಪಿಡಿಒ ಮಂಜುನಾಥ್ ಊಟದ ವ್ಯವಸ್ಥೆ ಕಲ್ಪಿಸಿದರು, ಪುನೀತ್,ರಮೇಶ್,ಕೃಷ್ಣಮೂರ್ತಿ, ಮಕ್ಕಳಿಗೆ ಟೈ ಬೆಲ್ಟ್ ವಿತರಣೆ ಮಾಡಿದರು, ಶಾಲಾ ಅಧ್ಯಕ್ಷ ಆಂಜಿನಪ್ಪ ಅಂಜಿನಪ್ಪ, ಉಪಾಧ್ಯಕ್ಷ ಶೀನಿವಾಸ್, ಸದಸ್ಯೆ ಗಾಯತ್ರಿ ಮುಖ್ಯಶಿಕ್ಷಕಿ ಸಂಗೀತಾ, ಸಹ ಶಿಕ್ಷಕಿ ಇಂದ್ರಾಣಿ ಇತರರು ಇದ್ದರು.