

ಧಾರವಾಡ: ಎಸ್ಸೆಸ್ಸೆಲ್ಸಿ ಪರೀಕ್ಷೆ (2022-23ನೇ ವರ್ಷ)ಯಲ್ಲಿ ಧಾರವಾಡ ತಾಲೂಕಿಗೆ ಮೊದಲ 3 ಸ್ಥಾನ ಪಡೆದ ವಿದ್ಯಾರ್ಥಿಗಳಾದ ನಾಜ್ ಬಳ್ಳಾರಿ, ಕಾವ್ಯಾ ಕುಂಬಾರ, ಸಮೀನಾ ನವಲೂರ ಅವರಿಗೆ ಶಾಸಕ ಅರವಿಂದ ಬೆಲ್ಲದ ಶುಕ್ರವಾರ ಲ್ಯಾಪ್ಟಾಪ್ ವಿತರಿಸಿದರು.
ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಫ್. ಜಾವೂರ, ಆರ್.ಎನ್. ಶೆಟ್ಟಿ ಪ್ರೌಢಶಾಲೆ ಮುಖ್ಯಾಧ್ಯಾಪಕಿ ಶ್ರೀದೇವಿ ಲದ್ದಿಮಠ, ಮಾದಾರಮಡ್ಡಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಲಿಂಗರಾಜ ಅರ್ಕಸಾಲಿ, ಮಹಮ್ಮದ್ ಯುನೀಸ್ ಛಡಿದಾರ್, ಪಾಲಕರು, ಇತರರು ಇದ್ದರು.