ಕಿಡಿಗೇಡಿಗಳಿಂದ ಮುಚ್ಚಳಿಕೆ ಪತ್ರ

27 SARAG 6
ಸರಗೂರು ತಾಲೂಕಿನ ಲಂಕೆ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರ ಇರುವ ನೀಲಿ ಬಾವುಟ ಹಿಡಿದು ಮೆರವಣಿಗೆ ನಡೆಸಲಾಯಿತು.
Published on

ಸರಗೂರು: ತಾಲೂಕಿನ ಮನುಗನಹಳ್ಳಿ ಗ್ರಾಪಂ ವ್ಯಾಪ್ತಿಯ ಲಂಕೆ ಗ್ರಾಮದಲ್ಲಿ ಇತ್ತೀಚೆಗೆ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರ ಇರುವ ಬಾವುಟವನ್ನು ಕಿತ್ತು ಹಾಕಿದ್ದ ಅದೇ ಗ್ರಾಮದ ಕೆಲ ಕಿಡಿಗೇಡಿಗಳಿಂದ ಮಂಗಳವಾರ ಪೊಲೀಸರು ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ.

ಜ್ಯೋತಿ, ಮಹೇಶ್ ಎಂಬ ಕಿಡಿಗೇಡಿಗಳನ್ನು ಅಂಬೇಡ್ಕರ್ ಸಂಘದ ಪದಾಧಿಕಾರಿಗಳು ಕಂಡುಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅವರಿಂದ ಮುಚ್ಚಳಿಕೆ ಬರೆಸಿಕೊಂಡ ಬಳಿಕ ಲಂಕೆ ಗ್ರಾಮದ ಎಲ್ಲ ಬೀದಿಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಇರುವ ನೀಲಿ ಬಾವುಟಗಳನ್ನು ಹಿಡಿದುಕೊಂಡು ಮೆರವಣಿಗೆ ಮಾಡಿಸಿದ್ದಾರೆ.
ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಸರಗೂರು ಶಿವಣ್ಣ, ಗ್ರಾಪಂ ಸದಸ್ಯ ರಮೇಶ, ಸೋಮಶೇಖರ್, ಶಿವರಾಜು, ದಯಾನಂದ, ದೇವರಾಜು, ಕೃಷ್ಣಪ್ಪ, ರವಿ, ಪುಟ್ಟು, ಸೋಮು, ಶ್ರೀನಿವಾಸ, ಗ್ರಾಮದ ಮುಖಂಡರು, ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net