ವ್ಯಾಪಕ ಬಳಕೆಯಿಂದ ಮಾತ್ರ ಭಾಷೆ ಉಳಿವು:ಸಿ.ಟಿ.ರವಿ

CTR in Rajyothsava
Published on

ಚಿಕ್ಕಮಗಳೂರು: ಭಾಷೆ ಮತ್ತು ಸಂಸ್ಕøತಿ ಒಂದು ನಾಣ್ಯದ ಎರಡು ಮುಖಗಳು. ಭಾಷೆ ಉಳಿಯುವುದು ಅಭಿಮಾನದಿಂದ. ಅಭಿಮಾನ ಕಳೆದುಕೊಂಡರೆ ಭಾಷೆಯನ್ನೂ ಕಳೆದುಕೊಳ್ಳುತ್ತೇವೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ನಗರ ಆಟೋ ಚಾಲಕರ ಸಂಘದಿಂದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ವಂದೇಮಾತರಂ ನಿಲ್ದಾಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಮೂಲ ಅಸ್ಮಿತೆ ಉಳಿಸಬೇಕು
ಭಾರತಾಂಬೆಯ ಮಗಳು ಕನ್ನಡ ತಾಯಿ ಭುವನೇಶ್ವರಿ. ತಾಯಿ ಭಾರತೀಯ ಮಗಳಾಗಿ ಕನ್ನಡ ನಾಡು, ನುಡಿ, ಸಂಸ್ಕøತಿ ಜತೆ ಭಾರತದ ಸಮಗ್ರತೆ, ಸಂಸ್ಕøತಿ, ಮೂಲ ಅಸ್ಮಿತೆ ಉಳಿಸುವ ಕೆಲಸ ಮಾಡಬೇಕಿದೆ. ಭಾಷೆ ನಶಿಸಿದರೆ ಸಂಸ್ಕøತಿಯನ್ನೂ ಕಳೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಕನ್ನಡಕ್ಕೆ 2,500 ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಾಲ್ಕು ಭಾಗಗಳಾಗಿ ಹರಿದು ಹಂಚಿಹೋಗಿದ್ದ ಕನ್ನಡ ನಾಡು, ಕನ್ನಡಿಗರು ಒಗ್ಗೂಡಲು ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಎಂದು ಹುಯಿಲಗೋಳ ನಾರಾಯಣ ರಾಯರು ಹಾಡಿ ಕನ್ನಡಿಗರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದರು ಎಂದು ಹೇಳಿದರು.

ಆಟೋ ಚಾಲಕರ ಕೊಡುಗೆ ಅಪಾರ
ಆಟೋ ಚಾಲಕರ ಮತ್ತು ಮಾಲೀಕರ ಸಂಘದ ತಾಲೂಕು ಅಧ್ಯಕ್ಷ ಎಂ.ಟಿ.ಜಗದೀಶ್ ಮರೇಬೈಲ್ ಮಾತನಾಡಿ, ರಾಜ್ಯದಲ್ಲಿ ಕನ್ನಡ ಭಾಷೆ ಉಳಿವಿಗೆ ಆಟೋ ಚಾಲಕರ ಕೊಡುಗೆ ಅಪಾರ. ರಾಜ್ಯೋತ್ಸವಗಳ ಮೂಲಕ ಕನ್ನಡದ ಕಂಪನ್ನು ಮೂಲೆಮೂಲೆಗೆ ಪಸರಿಸುವಲ್ಲಿ ಆಟೋ ಚಾಲಕರ ಪಾತ್ರ ಮಹತ್ವದ್ದು. ಜಿಲ್ಲೆಯ ಶೇ.70 ಚಾಲಕರಿಗೆ ಸ್ವಂತ ಸೂರಿಲ್ಲ ಮತ್ತು ಸಂಘದ ಕಾರ್ಯ ಚಟುವಟಿಕೆಗೆ ಕಟ್ಟಡವಿಲ್ಲ. ಬಡವರಿಗೆ ಆಶ್ರಯ ಮನೆ, ಸಂಘಕ್ಕೆ ಕಟ್ಟಡ ನಿರ್ಮಿಸಿಕೊಟ್ಟರೆ ಅನುಕೂಲವಾಗುತ್ತದೆ ಎಂದರು.

ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ನಗರಸಭೆ ಮಾಜಿ ಅಧ್ಯಕ್ಷ ಕೋಟೆ ರಂಗನಾಥ್, ವಂದೇ ಮಾತರಂ ನಿಲ್ದಾಣ ಅಧ್ಯಕ್ಷ ವಿಜಯ್‍ಕುಮಾರ್, ನಗರ ಠಾಣಾಧಿಕಾರಿ ತೇಜಸ್ವಿ, ಹಿರೇಮಗಳೂರು ಈಶ್ವರ್, ವೆಂಕಟೇಶ್, ಮಹೇಶ್, ಅಶ್ವತ್ಥ, ಜಯಪ್ರಕಾಶ್, ಶಂಕರೇಗೌಡ, ಗಾಯಕ ಮಲ್ಲಿಗೆ ಸುಧೀರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net