

ಹಗರಿಬೊಮ್ಮನಹಳ್ಳಿ: ತಾಲೂಕಿನ ಹಂಪಸಾಗರದ ಸದ್ಗುರು ಮಹಾದೇವ ತಾತನವರ ಮಠದಲ್ಲಿ, ಕನ್ನಡ ಸಾಹಿತ್ಯ ಪರಿಷತ್‌ನ ಹೋಬಳಿ ಘಟಕ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಸಂಸ್ಕೃತ ಪಾಠಶಾಲೆಯಿಂದ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ, ಮಠದ ಶಿವಲಿಂಗ ರುದ್ರಮುನಿ ಶಿವಾಚಾರ್ಯ ನೆರವೇರಿಸಿದರು.
ಇದನ್ನೂ ಓದಿ: http://ಕನ್ನಡ
ಕನ್ನಡ ಪ್ರೇಮ ನವೆಂಬರ ಒಂದರಂದು ಮಾತ್ರವಿರದೆ, ನಿತ್ಯ ಬಳಕೆಯಿಂದ ಕನ್ನಡ ಭಾಷೆ ನಂಬರ್ ಒನ್ ಆಗಬೇಕು ಮತ್ತು ಬೆಳೆಯ ಬೇಕು. ಅದು ಪ್ರತಿಯೊಬ್ಬರ ಮನದಲ್ಲಿರಬೇಕು ಎಂದರು. ಗ್ರಾಮ ಘಟಕದ ಅಧ್ಯಕ್ಷ ಲಿಂಗದಲ್ಲಿ ಬಸವರಾಜಪ್ಪ, ಪ್ರಮುಖರಾದ ಕರೆಂಗಿ ಸುಭಾಶ್, ಮಠದ ಸೇವಾ ಮಹಿಳಾ ಮುಖಂಡರು, ಸಾಹಿತ್ಯ ಪರಿಷತ್ತಿನ ಎಲ್ಲ ಪದಾಧಿಕಾರಿಗಳು ಇದ್ದರು.