ಪ್ರಕೃತಿ ಭಾಷೆಯು ಮೌನ, ಅವಧೂತ ಶ್ರೀ ವಿನಯ್ ಗುರೂಜೀ ಅಭಿಮತ

20cmy10.jpg
Published on


ಚಿಕ್ಕಬಳ್ಳಾಪುರ; ಪ್ರಕೃತಿಯನ್ನು ನೋಡಿ ಅರಿತವನು ಜ್ಞಾನಿಯಾಗಬಲ್ಲ. ಪ್ರಕೃತಿಯೊಂದಿಗಿನ ಸಂವಹನ ಭಾಷೆ ಮೌನ ಎಂದು ಗೌರಿಗದ್ದೆಯ ಅವಧೂತ ಶ್ರೀವಿನಯ್ ಗುರೂಜೀ  ಅಭಿಪ್ರಾಯಪಟ್ಟರು.
ಚಿಂತಾಮಣಿ ತಾಲೂಕಿನ
ಶ್ರೀಕ್ಷೇತ್ರ ಕೈವಾರದ ಶ್ರೀ ಯೋಗಿನಾರೇಯಣ ಮಠದಲ್ಲಿ, ಬೆಂಗಳೂರಿನ ಋಷಿ ಪ್ರಭಾಕರ್ ವಿದ್ಯಾ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಹೃದಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಗುರುಸ್ಮರಣೆಯಿಂದ ಅಹಂಕಾರವನ್ನು ಕಳೆದುಕೊಳ್ಳಬಹುದು. ಸಾಧನೆಯ ಹಂತದಲ್ಲಿ ಅಹಂಕಾರವನ್ನು ಕಳೆದುಕೊಳ್ಳುವುದು ದೊಡ್ಡ ಘಟ್ಟ. ಯೋಗ ಸಾಧನೆಗೆ ಪೂರಕವಾಗಿ ಆಹಾರ, ವಿಹಾರ, ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.
ತೆನಾಲಿಯ ಶ್ರೀ ಪ್ರಜ್ಞಾನಂದ ಸರಸ್ವತಿಜೀ ಬಾಲಸ್ವಾಮೀಜಿ, ಮಾತನಾಡಿ, ಸಿದ್ಧ ಸಮಾಧಿ ಯೋಗದ ಸಂಸ್ಥಾಪಕರಾದ ಶ್ರೀಋಷಿಪ್ರಭಾಕರ್ ಗುರುಜೀ ರವರು ಪ್ರಾಚೀನ ಋಷಿ ಪರಂಪರೆಯನ್ನು ಹಳ್ಳಿಹಳ್ಳಿಗೂ ತಲುಪಿಸಿದಂತಹ ಮಹನೀಯರು. ಸಾಧುಗಳು ಎಂದರೆ ರಜಸ್ಸು, ತಮಸ್ಸುಗಳನ್ನು ಬಿಟ್ಟು ಸಾತ್ವಿಕ ಗುಣದಲ್ಲಿರುವ ಸಾಧಕರು. ಯೋಗ ಸಾಧನೆ ಸಾತ್ವಿಕ ಆಹಾರ, ಪ್ರಾಣಾಯಾಮ, ಧ್ಯಾನದಿಂದ ಸಾಧ್ಯವಾಗುತ್ತದೆ ಎಂದರು.
ಪ್ರಾತಃಕಾಲದಿಂದಲೇ ಯೋಗ-ಧ್ಯಾನ ಚಟುವಟಿಕೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ  ಅಮೃತವಲ್ಲಿಯ ವೀಣಾವಾದನ, ವಿದುಷಿ ವೈಭವಿ ಕಲ್ಯಾ ಶಶಾಂಕ್ ಜೋಡಿದಾರ್‌ರವರಿಂದ ಕೊಳಲುವಾದನ, ವಿದುಷಿ |ವೀಣಾವಾಣಿಯ ಭರತನಾಟ್ಯ, ವಿದುಷಿ ರಜನಿರೆಡ್ಡಿ ಗಾಯನ ಗಮನ ಸೆಳೆಯ.
ಕಾರ್ಯಕ್ರಮದಲ್ಲಿ ಮಹಾ ಆಚಾರ್ಯ ಶ್ರೀಚೈತನ್ಯ ಕಾಯ್ಕಿಜೀ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net