

ದೇವದುರ್ಗ: ವಕೀಲ ದಿ.ಬಸನಗೌಡ ಪಾಟೀಲ್ ಕಾಯಕಯೋಗಿಯಾಗಿದ್ದು, ಹಲವು ಸಮಾಜಮುಖಿ ಕೆಲಸ ಮಾಡಿದ್ದಾರೆ. ಅವರ ಹೆಸರಿನಲ್ಲಿ ದತ್ತಿ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದು ಕಸಾಪ ತಾಲೂಕು ಸಂಘಟನಾ ಕಾರ್ಯದರ್ಶಿ ವೇಣುಗೋಪಾಲಗೌಡ ಹೇಳಿದರು.
ಪಟ್ಟಣದ ಶ್ರೀ ಕಪಿಲ ಸಿದ್ಧರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಕಸಾಪ ಮಾಜಿ ಕಾರ್ಯದರ್ಶಿ ಪ್ರಕಾಶ್ ಪಾಟೀಲ್ ವಕೀಲ ತಂದೆ ಬಸನಗೌಡ ಅಮರಾಪುರ ಸ್ಮರಣಾರ್ಥ ಆಯೋಜಿಸಿದ್ದ ಕಸಾಪಗೆ ದತ್ತಿನಿಧಿ ದೇಣಿಗೆ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.
ಬಸನಗೌಡರು ವಕೀಲ ವೃತ್ತಿಯೊಂದಿಗೆ ಪ್ರಗತಿಪರ ಕೃಷಿಕರಾಗಿದ್ದರು. ಸರಳ ಜೀವನ ಸಾರ್ಥಕ ಬದುಕು ನಡೆಸಿದರು. ನಾಡು, ನುಡಿ, ಭಾಷೆ ಅಸ್ಮಿತೆ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಕಸಾಪ ತಾಲೂಕು ಸಂಘಟನಾ ಕಾರ್ಯದರ್ಶಿ ಮೈನುದ್ದೀನ್ ಕಾಟಮಳ್ಳಿ ಮಾತನಾಡಿ, ದತ್ತಿಗಳು ಪರಿಷತ್‌ನ ಜೀವಾಳ. ಕನ್ನಡ ಚಟುವಟಿಕೆಗಳಿಗೆ ಉತ್ತಮ ವೇದಿಕೆ ಕಲ್ಪಿಸಿದ್ದಾರೆ. ಪ್ರಗತಿಪರ ಸಂಘಟನೆಗಳು, ಕನ್ನಡ ಪ್ರೇಮಿಗಳು, ಸಂಘಗಳು ನಿರಂತರವಾಗಿ ಪರಿಷತ್ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿದ್ದಾರೆ. ಇಂಥ ಕಾರ್ಯಗಳು ನಿರಂತರವಾಗಿ ನಡೆಯಬೇಕು ಎಂದರು.
ದತ್ತಿದಾನಿ ಪ್ರಕಾಶ್ ಪಾಟೀಲ್ ಅಮರಾಪುರ, ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ್, ರಾಜಾ ರಂಗಪ್ಪ ನಾಯಕ, ಭಾನುಪ್ರಕಾಶ್ ಖೇಣೇದ್, ಸುಭಾಶ್ಚಂದ್ರ ಪಾಟೀಲ್, ಗುರು ಪಾಟೀಲ್, ಚಂದ್ರಶೇಖರ್ ಪಾಟೀಲ್, ವೀರೇಶ್ ಬಳೆ, ಶಂಕರಲಿಂಗ ತಾತ, ಭೋಜಪ್ಪ ಮಣಜಿಗಿ, ಶರಣಯ್ಯ ಸ್ವಾಮಿ, ರಂಗಪ್ಪ ಬಲಿದವ್, ಗಿರಿಜಮ್ಮ, ಸೂಗಮ್ಮ, ಶಿವರಾಜ್ ರುದ್ರಾಕ್ಷಿ, ಮಹೇಂದ್ರ ಮ್ಯಾತ್ರಿ, ಶ್ರೀನಿವಾಸ್ ದಾಸರ ಇತರರಿದ್ದರು.