ಸಹೃದಯ ಸಮಾಜ ನಿರ್ವಾಣಕ್ಕೆ ಭಾಷೆ ಅವಶ್ಯ

FotoJet 23 28
Published on

ಸಮ್ಮೇಳನಾಧ್ಯಕ್ಷ ಸಂಪಿಗೆ ತೋಂಟದಾರ‌್ಯ ಹೇಳಿಕೆ | ತಾಲೂಕುಮಟ್ಟದ 6ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ತುರುವೇಕೆರೆ: ಸಹೃದಯ ಸವಾಜದ ನಿರ್ವಾಣದಲ್ಲಿ ಸಾಹಿತ್ಯ, ಕಲೆ, ಶಿಕ್ಷಣ ಮತ್ತು ಭಾಷೆೆಗಳ ಪಾತ್ರ ದೊಡ್ಡದು ಎಂದು ಸಮ್ಮೇಳನಾಧ್ಯಕ್ಷ ಸಂಪಿಗೆ ತೋಂಟದಾರ‌್ಯ ತಿಳಿಸಿದರು.

ಪಟ್ಟಣದ ಶ್ರೀಸತ್ಯ ಗಣಪತಿ ಆಸ್ಥಾನ ಮಂಟಪದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ 6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಾತನಾಡಿ, ಸಾರ್ವತ್ರಿಕವಾಗಿಯೂ, ಸಾರ್ವಕಾಲಿಕವಾಗಿಯೂ ಸಲ್ಲುವ, ಪ್ರತಿಯೊಬ್ಬ ಮನುಷ್ಯನೂ ಪ್ರಾರ್ಥಿಸಲು ಬಯಸುವ ಬೃಹದಾರಣ್ಯಕ ಉಪನಿಷತ್ತಿನ ಮಂತ್ರ ಅಥವಾ ಶ್ಲೋಕವನ್ನು ಪ್ರಸ್ತಾಪಿಸುತ್ತೇನೆ. ಅಸತೋವಾ ಸದ್ಗಮಯ ತಮ ಸೋವಾ ಜ್ಯೋತಿರ್ಗಮಯ ಮೃತ್ಯೋರ್ವಾ ಅಮೃತಂಗಮಯ ಅಂದರೆ ಅಸತ್ಯದಿಂದ ನನ್ನನ್ನು ಸತ್ಯದ ಕಡೆಗೆ ನೆಡೆಸು, ಕತ್ತಲೆಯಿಂದ ನನ್ನನು ಬೆಳಕಿನ ಕಡೆಗೆ ನಡೆಸು ಮೃತ್ಯವಿನಿಂದ ನನ್ನನ್ನು ಅಮೃತತ್ವದ ಕಡೆಗೆ ನಡಸು, ವಾನವನು ಸರ್ವವನ್ನೂ ಒಳಪಡುವ ಪ್ರೇಮ ಜ್ಞಾನಗಳ ಐಕ್ಯತೆಯ ಸಿದ್ಧಿ ಕಡೆಗೆ ನಡೆಯಬೇಕು ಎಂಬುದು ಸಂದೇಶ ಎಂದರು.

ಸಾಹಿತಿ, ಸಂಸ್ಕೃತಿ ಚಿಂತಕ, ನಾಡೋಜ ಬರಗೂರು ರಾಮಚಂದ್ರಪ್ಪ ವಾತನಾಡಿ, ಕನ್ನಡ ಭಾಷೆ ಉಳಿಸಬೇಕು, ಬೆಳಸಬೇಕು. ಕನ್ನಡ ವಾತನಾಡುವ ಜನರನ್ನು ಉಳಿಸಬೇಕಿದೆ. ಜನಗಳ ಮೂಲಕ ಭಾಷೆ ಬೆಳೆಸಬೇಕು. ಕನ್ನಡದಲ್ಲಿ ಓದಿದವರಿಗೆ ಉದ್ಯೋಗ ದೊರೆಯಬೇಕು. ಹೆಚ್ಚಿನ ಸ್ಥಾನ ವಾನ ದೊರೆಯವಂತಾಗಬೇಕು. ಕನ್ನಡ ನಾಡಿನ ಜನರ ಬದುಕು ಉಳಿಸಿಕೊಟ್ಟಲ್ಲಿ ಕನ್ನಡ ಉಳಿಯುತ್ತದೆ ಎಂದರು.

ಸವಾರಂಭದಲ್ಲಿ ಕಲ್ಪ ವಿಜಯ ನೆನಪಿನ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಕೆ.ಮಂಜೇಶ್ ಅವರ ವಾರಕೊಂದೇ ಸಂತೆ ಪುಸ್ತಕ, ಗಿರೀಶ್ ಬಾಬು ಹೊಸಮನೆ ಅವರ ಪ್ರೇಮಪಾರಿಜಾತ ಪುಸ್ತಕ, ಅಮ್ಮಸಂದ್ರ ಸುರೇಶ್ ಅವರ ಅಗ್ನಿಕುಂಡದಿಂದ ಬಂದ ಚೇತನ ಪುಸ್ತಕ, ಹೊಣಕೆರೆ ಶ್ರೀನಿವಾಸ್ ಅವರ ಹಳದಿಹಕ್ಕಿ ಪುಸ್ತಕ ಬಿಡುಗಡೆ ಮಾಡಲಾಯಿತು. ಸಮ್ಮೇಳನದಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಬಗ್ಗೆ ಮೂರು ಗೋಷ್ಠಿಗಳು ಹಮ್ಮಿಕೊಳ್ಳಲಾಗಿತ್ತು.

ಇಒ ಶಿವರಾಜಯ್ಯ, ಪಪಂ ಅಧ್ಯಕ್ಷೆ ಶೀಲಾ, ಬಿಇಒ ಎನ್.ಸೋಮಶೇಖರ್, ಕಸಾಪ ತಾಲೂಕು ಅಧ್ಯಕ್ಷ ಡಿ.ಪಿ.ರಾಜು, ವಾಜಿ ಅಧ್ಯಕ್ಷ ಟಿ.ಎಸ್.ಬೋರೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಲಿಂಗಪ್ಪ, ಪ್ರೋ.ಕೆ.ಪುಟ್ಟರಂಗಪ್ಪ, ಡಯಟ್ ತುಮಕೂರು ಎಸ್.ಯೋಗಾನಂದ್, ಗೌರವ ಕಾರ್ಯದರ್ಶಿ ಡಿ.ಎನ್.ಯೋಗೀಶ್ವರಪ್ಪ, ಮುಖಂಡರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net