

ಶಿರಸಿ; ಮನುಷ್ಯ ಜೀವನದ ಪ್ರತಿ ಹಂತದಲ್ಲೂ ಸಂಘ, ಸಂಘಟನೆಯ ಜತೆ ಜತೆಗೆ ಬೆಳೆಯುತ್ತ ಹೋಗುತ್ತಾನೆ. ಇಂತಹ ಸ್ವಭಾವ ಇರುವ ಮನುಷ್ಯನ ಮೊದಲ ಸಂಘಟನೆ ಎಂದರೆ ನಮ್ಮ ಮನೆ, ಊರು, ರಾಜ್ಯ, ದೇಶ, ಭಾಷೆ, ಧರ್ಮ, ವಿಶ್ವಮಾನವತೆ. ನಮ್ಮ ಮನೆ, ಭಾಷೆ, ಸಂಸೃ್ಕ, ದೇಶಪ್ರೇಮ ವಿಶ್ವ ಶಾಂತಿಗೆ ಪೂರಕವಾಗಿದೆ ಎಂದು ನಟಿ ಪೂಜಾ ಗಾಂಧಿ ಹೇಳಿದರು.
ತಾಲೂಕಿನ ಬೆಟ್ಟಕೊಪ್ಪದಲ್ಲಿ ವಿಶ್ವ ಶಾಂತಿ ಸೇವಾ ಟ್ರಸ್ಟ್ ಭಾನುವಾರ ರಾತ್ರಿ ಆಯೋಜಿಸಿದ್ದ 13ನೇ ‘ನಮ್ಮನೆ ಹಬ್ಬ’ ಉದ್ಘಾಟಿಸಿ, ಕ್ಯಾಲೆಂಡರ್ ಬಿಡುಗಡೆಗೊಳಿಸಿ ವಿಶ್ವಶಾಂತಿ ಸರಣಿಯ ನೂತನ ಯಕ್ಷರೂಪಕ ವಿಶ್ವಾಭಿಗಮನಮ್ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಉಳಿದ ಭಾಷೆಗಿಂತ ಕನ್ನಡವೇ ಮೇಲು. ಕನ್ನಡತನ, ಸಂಸೃ್ಕ ಎಂದೂ ನಾವು ಬಿಡಬಾರದು. ನಾನು ಹುಟ್ಟಿದ್ದು ಉತ್ತರ ಪ್ರದೇಶದಲ್ಲಾದರೂ ಕನ್ನಡದ ಮೇಲೆ ತುಂಬಾ ಪ್ರೀತಿಯಿದೆ ಎಂದರು.
ಸಾಧಕರಿಬ್ಬರಿಗೆ ನಮ್ಮನೆ ಪ್ರಶಸ್ತಿ ಹಾಗೂ ಯುವ ಗಾಯಕಿಗೆ ನಮ್ಮನೆ ಪುರಸ್ಕಾರ ಪ್ರದಾನ ಮಾಡಿದ ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ ಮಾತನಾಡಿ, ಹಳ್ಳಿಯಲ್ಲಿ ಕೃಷಿ ಸೇರಿ ಸಾಕಷ್ಟು ಕ್ಷೇತ್ರದಲ್ಲಿ ಸಮಸ್ಯೆಗಳಿವೆ. ಹಳ್ಳಿಯ ಯುವಕರು ದೇಶ, ವಿದೇಶಗಳಿಗೆ ವಲಸೆ ಹೋಗುತ್ತಿದ್ದು ವೃದ್ಧಾಶ್ರಮಗಳಾಗುತ್ತಿವೆ. ನಾವು ಜಗತ್ತನ್ನು ಸುತ್ತಬೇಕು. ಅಲ್ಲಿನ ಉತೃ್ಕ್ಟತೆಯನ್ನು ಗ್ರಹಿಸಿ ನಮ್ಮ ಬೇರಿಗೆ ನೀಡಬೇಕು. ಆದರೆ, ಇಲ್ಲಿಂದ ಹೋದವರು ನಮ್ಮ ಮೂಲ ಬೇರನ್ನು ಮರೆಯಬಾರದು. ಮನುಷ್ಯನ ಬದುಕು ರೆಕ್ಕೆ ಬೇರುಗಳ ಸಮನ್ವಯ ಆಗಬೇಕು. ಹಳ್ಳಿಗಳು ಸಾಂಸೃ್ಕಕ ಕೇಂದ್ರಗಳಾಗಬೇಕು. ಹಳ್ಳಿಗರು ಆಶಾವಾದಿಗಳಾಗಬೇಕು ಎಂದರು.
ಪಾರ್ತಿಸುಬ್ಬ ಪ್ರಶಸ್ತಿ ಪುರಸೃ್ಕ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಮಾತನಾಡಿ, ವಿಜ್ಞಾನದಲ್ಲಿ ಕೃತಕ ಬುದ್ಧಿಮತ್ತೆ ಮೆರೆಯುತ್ತಿರುವ ಕಾಲವಿದು. ಯಕ್ಷಗಾನವನ್ನು ಈ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅದ್ಭುತವಾಗಿ ಪ್ರಸ್ತುಪಡಿಸಬಹುದು. ಆದರೆ, ಬೌದ್ಧಿಕ ಜಾಣ್ಮೆ ಮೈಗೂಡಿಸಿಕೊಳ್ಳುವ ಈ ಪ್ರಭೆಯಿಂದ ಸಾತ್ವಿಕ ಅಭಿನಯ ಸಾಧ್ಯವಿಲ್ಲ ಎಂದರು.
ನಿವೃತ್ತ ಪ್ರಾಚಾರ್ಯ ಉಮಾಕಾಂತ ಭಟ್ಟ ಮಾತನಾಡಿ, ವಿಶ್ವದ ಮನೆ, ಮನಗಳಲ್ಲಿ ಅಶಾಂತಿ ನೆಲೆಸಿದೆ. ನಮಗೆ ಶಾಂತಿ ಬೇಕಾಗಿದ್ದು ಅರಸುತ್ತಿದ್ದೇವೆ. ಶಾಂತಿಗೆ ಮನಸನ್ನು ಕಟ್ಟುವ ಕೆಲಸ ಮಾಡಬೇಕು ಎಂದರು. ನಮ್ಮನೆ ಪ್ರಶಸ್ತಿ ಪುರಸೃ್ಕ ಚಲನಚಿತ್ರ ಕಲಾವಿದ ನೀರ್ನಳ್ಳಿ ರಾಮಕೃಷ್ಣ, ಪ್ರಶಸ್ತಿ ಪುರಸೃ್ಕ ಅವಿನಾಶಿ ಸಂಸ್ಥೆ ಸ್ಥಾಪಕ ಅಣ್ಣಾರಾಯ ತಳವಾರ, ಯುವ ಪುರಸ್ಕಾರಕ್ಕೆ ಭಾಜನರಾದ ಯುವ ಗಾಯಕಿ ಐಶ್ವರ್ಯ ದೇಸಾಯಿ ಧಾರವಾಡ ಮಾತನಾಡಿದರು.
ವಿಶ್ವಶಾಂತಿ ಸೇವಾ ಟ್ರಸ್ಟ್ ಅಧ್ಯಕ್ಷ, ಹಿರಿಯ ಪರ್ತಕರ್ತ ರವೀಂದ್ರ ಭಟ್ಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಘವೇಂದ್ರ ಸಕಲಾತಿ ಪ್ರಾರ್ಥಿಸಿದರು. ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ಸ್ವಾಗತಿಸಿದರು. ತುಳಸಿ ಹೆಗಡೆ, ವಿನಾಯಕ ಕೋಡ್ಸರ, ವಿನಯ ಹೊಸ್ತೋಟ ಸನ್ಮಾನ ಪತ್ರ ವಾಚಿಸಿದರು. ನಾರಾಯಣ ಭಾಗ್ವತ, ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ನಿರೂಪಿಸಿದರು. ಉಪಾಧ್ಯಕ್ಷ ರಮೇಶ ಹಳೆಕಾನಗೋಡ ವಂದಿಸಿದರು. ಇದೇ ವೇದಿಕೆಯಲ್ಲಿ ಶಾಸಕ ಭೀಮಣ್ಣ ನಾಯ್ಕ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕೇಶವ ಹೆಗಡೆ ಕೊಳಗಿ ಅವರನ್ನು ಗ್ರಾಮಸ್ಥರ ಪರವಾಗಿ ಗೌರವಿಸಲಾಯಿತು.
ಐದು ತಾಸು ಕುಳಿತ ಶಾಸಕ : ಶಾಸಕ ಭೀಮಣ್ಣ ನಾಯ್ಕ ಅವರು ನಮ್ಮನೆ ಹಬ್ಬ ಕಾರ್ಯಕ್ರಮದ ಆರಂಭದಿಂದ ಕೊನೆಯವರೆಗೂ ಸುಮಾರು ಐದು ತಾಸು ಕಾಲ ಕುಳಿತು ಕಾರ್ಯಕ್ರಮ ವೀಕ್ಷಿಸಿದ್ದು ವಿಶೇಷವಾಗಿತ್ತು. ಜತೆಗೆ ಕಲಾವಿದೆ ತುಳಸಿ ಒಂದು ತಾಸು ಪ್ರದರ್ಶಿಸಿದ ವಿಶ್ವಾಭಿಗಮನಮ್ ಯಕ್ಷ ನೃತ್ಯ ರೂಪಕ ಸಂಯೋಜಿಸಿದ ತಂಡವನ್ನು ಗೌರವಿಸಿದರು. ವಿವಿಧ ಕ್ಷೇತ್ರಗಳ ಗಣ್ಯರು, ಹಳ್ಳಿಗರು ಸೇರಿ 700ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಪ್ರಸಿದ್ಧ ತಾರೆ ಪೂಜಾ ಗಾಂಧಿ ಅವರು ನೆಲದಲ್ಲಿ ಕುಳಿತು ನೂತನ ಯಕ್ಷ ರೂಪಕ ಅನುಭವಿಸಿದ್ದು ಗಮನ ಸೆಳೆಯಿತು.
ಈ ನೆಲದ ಹಾಡು, ಸಂಗೀತ, ನೃತ್ಯ. ಸಂಸೃ್ಕ ಒಳಗೊಂಡ ನಮ್ಮನೆ ಹಬ್ಬ ಪ್ರತಿ ವರ್ಷ ಸೊಗಸಾಗಿ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ನಮ್ಮನೆ ಹಬ್ಬದ ಸ್ಪೂರ್ತಿ, ಪ್ರೇರಣೆಯಿಂದ ರಾಜ್ಯದಲ್ಲಿ ಪ್ರತಿ ವಾರ ಇಂತಹ ಕಾರ್ಯಕ್ರಮ ನಡೆಯುವಂತಾಗಲಿ. | ಪೂಜಾ ಗಾಂಧಿ, ಚಿತ್ರ ನಟಿ