

ಜೊಯಿಡಾ: ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಬೆಳಗಾವಿ-ಕಾರವಾರ ರಾಜ್ಯ ಹೆದ್ದಾರಿಯ ಗಣೇಶಗುಡಿ ಸಮೀಪದ ಇಳವಾ ಬಳಿ ಭೂಕುಸಿತ ಸಂಭವಿಸಿದೆ.
ಸೂಪಾ ಅಣೆಕಟ್ಟಿಯಿಂದ 2 ಕಿ.ಮೀ ದೂರದ ಇಳವಾ ಸಮೀಪ ಭೂ ಕುಸಿತವಾಗುತ್ತಿದ್ದು, ರಸ್ತೆಯ ಮೇಲೆ ಮರ, ಮಣ್ಣು ಬೀಳುತ್ತಿದೆ. ಜೋರು ಮಳೆಯಾದರೆ ಮಣ್ಣು ಮತ್ತು ಮರ-ಗಿಡಗಳು ಕುಸಿದು ಸಂಪೂರ್ಣ ರಸ್ತೆಗೆ ಬರುವ ಆತಂಕ ಎದುರಾಗಿದೆ. ಸಂಬಂಧಪಟ್ಟ ಕಂದಾಯ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು ಮುಂದಿನ ಅನಾಹುತ ತಪ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.