200 ಮೀಟರ್ ಪ್ರದೇಶದಲ್ಲಿ ಭೂಕುಸಿತ; ಸ್ಥಳೀಯ ಸಂಪರ್ಕ ಮಾರ್ಗವೂ ಕಡಿತ!

Untitled-1
ಸಾಂದರ್ಭಿಕ ಚಿತ್ರ
Published on

ಉತ್ತರಕನ್ನಡ: ಪ್ರಾಕೃತಿಕ ವಿಕೋಪಗಳು ರಾಜ್ಯದಲ್ಲಿ ಮತ್ತೆ ಮತ್ತೆ ಸಂಭವಿಸುತ್ತಿದ್ದು, ಇದೀಗ ಉಂಟಾಗಿರುವ ಭೂಕುಸಿತ ಸುತ್ತಲಿನ ಪ್ರದೇಶದ ಜನರಲ್ಲಿ ಭಾರಿ ಆತಂಕವನ್ನೇ ಉಂಟುಮಾಡಿದೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಕೊಡ್ಸಳ್ಳಿ ಎಂಬಲ್ಲಿ ಈ ಭೂಕುಸಿತ ಸಂಭವಿಸಿದೆ.

ಇಲ್ಲಿನ ಕೊಡ್ಸಳ್ಳಿ ಅಣೆಕಟ್ಟು ಸಮೀಪವೇ ಈ ಭೂಕುಸಿತ ಸಂಭವಿಸಿರುವುದು ಆತಂಕದ ಪ್ರಮಾಣವನ್ನು ಹೆಚ್ಚಿಸಿದೆ. ಹೆಚ್ಚೂಕಡಿಮೆ 200 ಮೀಟರ್​ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದ್ದು, ಕದ್ರಾದಿಂದ ಕೊಡ್ಸಳ್ಳಿ ಮಾರ್ಗದ ಸಂಪರ್ಕವೂ ಕಡಿತಗೊಂಡಿದೆ.

ಭೂಕುಸಿತದಿಂದಾಗಿ ಗುಡ್ಡದಿಂದ ಬಂಡೆಗಲ್ಲುಗಳು ಜಾರಿ ಬಂದಿರುವುದಲ್ಲೆ ಗಿಡಮರಗಳೂ ಹಾನಿಗೀಡಾಗಿವೆ. ಸ್ಥಳಕ್ಕೆ ಜಿಯಾಲಜಿಕಲ್ ಸರ್ವೆ ಆಫ್​ ಇಂಡಿಯಾದ ಭೂ ವಿಜ್ಞಾನಿಗಳಾದ ಕಮಲಕುಮಾರ, ಮೋಹನರಾಜ್ ಮುಂತಾದವರು ಭೇಟಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net