ಆತಂಕ ಹುಟ್ಟಿಸಿದ ಭೂಕುಸಿತ

19 YLP 2
Published on

ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಗ್ರಾಪಂ ವ್ಯಾಪ್ತಿಯ ಬೀಗಾರ- ಬಾಗಿನಕಟ್ಟಾ ರಸ್ತೆಯ ಪಕ್ಕ ಭೂಕುಸಿತವಾಗಿದ್ದು, ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.

ಬೀಗಾರ-ಬಾಗಿನಕಟ್ಟಾ ರಸ್ತೆಯ ಪಕ್ಕ ಪ್ರತಿ ವರ್ಷ ಭೂಕುಸಿತ ಆಗುತ್ತಿದೆ. ನಾಲ್ಕು ವರ್ಷಗಳ ಹಿಂದೆ ರಸ್ತೆ ಸಂಪೂರ್ಣ ಕುಸಿದು, ಸಂಚಾರ ಬಂದ್ ಆಗಿತ್ತು. ನಂತರ ಬದಲಿ ಸಿಮೆಂಟ್ ರಸ್ತೆ ಮಾಡಲಾಗಿತ್ತು. ಕಳೆದ ವರ್ಷ ಸಿಮೆಂಟ್ ರಸ್ತೆಯ ಪಕ್ಕದಲ್ಲೇ ಭೂಕುಸಿತವಾಗಿತ್ತು. ಈ ಬಾರಿಯೂ ಇದೇ ಪ್ರದೇಶದಲ್ಲಿ ಭೂಕುಸಿತವಾಗಿದೆ.

ಕಾಂಕ್ರೀಟ್ ರಸ್ತೆಯ ಅಡಿ ಭಾಗದ ಮಣ್ಣು ಕುಸಿದು, ರಸ್ತೆಯೇ ಕುಸಿಯುವ ಆತಂಕ ಎದುರಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net