ಮಣ್ಣು ಕುಸಿದು ಟ್ಯಾಂಕರ್ ಪಲ್ಟಿ

Tanker
Published on

ಯಲ್ಲಾಪುರ: ದುರಾದೃಷ್ಟ ಅಂದರೆ ಇದೇ ಇರಬೇಕು. ರಸ್ತೆ ಪಕ್ಕ ಟ್ಯಾಂಕರ್ ನಿಲ್ಲಿಸಲಾಗಿತ್ತು. ನಿಲ್ಲಿಸದ ಜಾಗದಲ್ಲಿ ಮಣ್ಣು ಕುಸಿದು ಟ್ಯಾಂಕರ್ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ತಾಲೂಕಿನ ಗೇರಗದ್ದೆ ಕ್ರಾಸ್ ಬಳಿ ನಡೆದಿದೆ.

ವಿಜಯಪುರದಿಂದ ಮಂಗಳೂರು ಕಡೆಗೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿಯನ್ನು ಗೇರಗದ್ದೆ ಕ್ರಾಸ್ ಬಳಿ ರಸ್ತೆಯ ಪಕ್ಕ ನಿಲ್ಲಿಸಿ, ಚಾಲಕ ಹಾಗೂ ಕ್ಲೀನರ್ ಊಟ ಮಾಡುತ್ತಿದ್ದರು. ಈ ವೇಳೆ ಟ್ಯಾಂಕರ್‌ನ ಭಾರಕ್ಕೆ ಏಕಾಏಕಿ ರಸ್ತೆ ಪಕ್ಕದ ಗಟಾರದ ಮಣ್ಣು ಕುಸಿದಿದ್ದು, ಲಾರಿ ಪಲ್ಟಿಯಾಗಿದೆ. ಲಾರಿ ಜಖಂಗೊಂಡಿದ್ದು, ಚಾಲಕ, ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net