

ಮಡಿಕೇರಿ:
ಜಿಲ್ಲೆಯ 5 ತಾಲೂಕುಗಳ ಪೈಕಿ ಮಡಿಕೇರಿ, ಕುಶಾಲನಗರ ಹಾಗೂ ಪೊನ್ನಂಪೇಟೆ ತಾಲೂಕುಗಳಲ್ಲಿ ಮಂಗಳವಾರ ಮಳೆಯಿಂದ ಹಾನಿ ಉಂಟಾಗಿದೆ. 1 ಭೂಕುಸಿತ ಪ್ರಕರಣ ವರದಿಯಾಗಿದೆ. 2 ಮನೆಗಳಿಗೆ ಹಾನಿಯಾಗಿದ್ದು, 8 ಮನೆಗಳಿಗೆ ಭಾಗಶಃ ಹಾನಿ ಆಗಿದೆ. 58 ವಿದ್ಯುತ್ ಕಂಬಗಳು ಮುರಿದಿವೆ. 1 ಟ್ರಾನ್ಸ್ಫಾರ್ಮರ್ ಹಾಳಾಗಿದೆ.
ಮಡಿಕೇರಿ ತಾಲೂಕಿನಲ್ಲಿ ಭಾಗಮಂಡಲ, ಬೇಗೂರು ಪ್ರವಾಹ ಪೀಡಿತವಾಗಿದೆ. ನಾಪೋಕ್ಲು – ಚೆರಿಯಪರಂಬು ರಸ್ತೆ ಬಂದ್ ಆಗಿದೆ.
ಕುಶಾಲನಗರ ತಾಲೂಕಿನಲ್ಲಿ ಸಾಯಿ ಬಡಾವಣೆ, ನೆಲ್ಲಿಹುದಿಕೇರಿ ಪ್ರವಾಹಪೀಡಿತವಾಗಿದ್ದು, ಬೆಟ್ಟದಕಾಡು ರಸ್ತೆ ಬಂದ್ ಆಗಿದೆ. ಪೊನ್ನಂಪೇಟೆ ತಾಲೂಕಿನಲ್ಲಿ ಕೋತೂರು ಗ್ರಾಮ ಪ್ರವಾಹ ಪೀಡಿತವಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ