ಭೂಸಂತ್ರಸ್ತರಿಗೆ ಉದ್ಯೋಗ ಭದ್ರತೆ ಒದಗಿಸಿ

22 kurugodu 1
ಕುರುಗೋಡು ಸಮೀಪದ ಕುಡತಿನಿಯಲ್ಲಿ ಭೂ ಸಂತ್ರಸ್ತರ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ಸಿಪಿಐಎಂ ಗೌರವಾಧ್ಯಕ್ಷ ಯು.ಬಸವರಾಜ್, ಪ್ರಮುಖರಾದ ತಿಪ್ಪೇಸ್ವಾಮಿ, ಶಿವಣ್ಣ, ಗಿರಿಜಪ್ಪ, ಪಂಪಣ್ಣ ಬಾಲಪ್ಪ, ಮಂಜು ಇದ್ದರು.
Published on

ಕುರುಗೋಡು: ರೈತರ ಬೇಡಿಕೆ ಈಡೇರಿಸದೆ ಕಾಮಗಾರಿ ಆರಂಭಿಸಿರುವ ಕೆಐಎಡಿಬಿ ಕ್ರಮವನ್ನು ವಿರೋಧಿಸಿ ಭೂ ಸಂತ್ರಸ್ತರ ಹೋರಾಟ ಸಮಿತಿಯಿಂದ ಕುಡತಿನಿಯಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಸಮಿತಿ ಗೌರವಾಧ್ಯಕ್ಷ ಯು.ಬಸವರಾಜ್ ಮಾತನಾಡಿ, ಈ ಹಿಂದೆ ಮಿತ್ತಲ್, ಬ್ರಾಹ್ಮಿಣಿ ಹಾಗೂ ಎನ್‌ಎಂಡಿಸಿ ಕಂಪನಿ ರೈತರ 12,500 ಎಕರೆ ಜಮೀನನ್ನು ಬೃಹತ್ ಕೈಗಾರಿಕೆ ಸ್ಥಾಪನೆಗಾಗಿ ಸ್ವಾಧೀನ ಪಡೆಸಿಕೊಂಡಿದ್ದವು. ಭೂಮಾಲೀಕರ ಕುಟುಂಬಕ್ಕೆ ಉದ್ಯೋಗ ನೀಡುವ ಭರವಸೆ ನೀಡಿದ್ದವು. ಆದರೀಗ ಸಣ್ಣ ಕೈಗಾರಿಕೆ ಆರಂಭಿಸಲು ಕಂಪನಿ ಮುಂದಾಗಿದ್ದು ಇದರಿಂದ ಭೂಮಿ ನೀಡಿದವರಿಗೆ ಉದ್ಯೋಗ ಭದ್ರತೆ ಇಲ್ಲದಂತಾಗಿದೆ ಎಂದರು.

ಸಂಘದ ಪ್ರಮುಖ ತಿಪ್ಪೇಸ್ವಾಮಿ ಮಾತನಾಡಿ, ರೈತರ ಭೂಮಿಗೆ ನ್ಯಾಯಯುತ ಬೆಲೆ ಹಾಗೂ ಉದ್ಯೋಗ ಭದ್ರತೆ ನೀಡುವ ತನಕ ಕಾಮಗಾರಿ ಆರಂಭಿಸದಂತೆ ಈ ಹಿಂದಿನ ಸರ್ಕಾರಕ್ಕೆ, ಅಧಿಕಾರಿಗಳಿಗೆ ಮನವಿ ನೀಡಲಾಗಿತ್ತು. ಹೀಗಾಗಿ ಕಳೆದ 916 ದಿನದಿಂದ ಹೋರಾಟ ನಡೆಯುತ್ತಿದೆ ಎಂದರು.

ಪೊಲೀಸರು ಶಾಂತಿ ಸಭೆ ನಡೆಸಿದರು. ಪ್ರಮುಖರಾದ ಶಿವಣ್ಣ, ಗಿರಿಜಪ್ಪ, ಪಂಪಣ್ಣ ಬಾಲಪ್ಪ, ಮಂಜು, ರಮೇಶ್, ಮಾರೇಶ್, ರುದ್ರಪ್ಪ, ನಾಗಪ್ಪ, ಜಗದೀಶ್, ಹನುಮಣ್ಣ, ಜಂಬಣ್ಣ, ಧರ್ಮಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net