ಜನತೆಗೆ ತೊಡಕಾಗದಿರಲಿ ಸರ್ಕಾರಿ ಕಾನೂನು : ಆರ್‌ಡಿಒ ಕಚೇರಿ, ಪಟ್ಟಾಮೇಳಕ್ಕೆ ಚಾಲನೆ ನೀಡಿ ಸಚಿವ ಕೆ.ರಂಜನ್ ಸಲಹೆ

New Project
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಸರ್ಕಾರದ ಕಾನೂನುಗಳು ಬಡ ಜನತೆಗೆ ತೊಡಕಾಗದಂತೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಕಂದಾಯ ಮತ್ತು ಸರ್ವೇ ಇಲಾಖೆ ಸಚಿವ ಕೆ.ರಾಜನ್ ಹೇಳಿದರು.

ಕಾಸರಗೋಡು ಪಿಲಿಕುಂಜೆಯಲ್ಲಿ ಕಂದಾಯ ವಿಭಾಗೀಯ ಕಚೇರಿ ಹಾಗೂ ಜಿಲ್ಲಾಮಟ್ಟದ ಪಟ್ಟಾ ಮೇಳದಲ್ಲಿ ಫಲಾನುಭವಿಗಳಿಗೆ ಭೂಮಿಯ ಹಕ್ಕುಪತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕೇರಳವನ್ನು ಮುಂದಿನ ರಾಜ್ಯೋತ್ಸವ ವೇಳೆಗೆ ಕಡು ಬಡವರಿಲ್ಲದ ರಾಜ್ಯವನ್ನಾಗಿ ೋಷಿಸುವ ರೀತಿಯಲ್ಲಿ ಸರ್ಕಾರ ಕಾರ್ಯಯೋಜನೆ ತಯಾರಿಸುತ್ತಿದೆ. ರಾಜ್ಯದಲ್ಲಿ ಇದುವರೆಗೆ 8 ಲಕ್ಷ ಹೆಕ್ಟರ್ ಭೂಮಿ ಭೂ ರಹಿತರಿಗೆ ವಿತರಿಸಲಾಗಿದೆ. ಈ ಬಾರಿ ಜಿಲ್ಲೆಯಲ್ಲಿ 1503 ಮಂದಿಗೆ ಜಾಗದ ಹಕ್ಕುಪತ್ರ ವಿತರಿಸಲಾಗಿದ್ದು, ಇದರಲ್ಲಿ 123 ಕೊರಗ ಸಮುದಾಯದ ಕುಟುಂಬ ಒಳಗೊಂಡಿರುವುದಾಗಿ ತಿಳಿಸಿದರು.

ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಸರ್ಕಾರದ ‘ಕಡು ಬಡವರಿಲ್ಲದ ಕೇರಳ ಯೋಜನೆ’ಯನ್ವಯ ಕಾಸರಗೋಡು ಜಿಲ್ಲೆಯ ಅತಿ ಬಡ ವರ್ಗಗಳಿಗೆ ಭೂಮಿಯ ಹಕ್ಕುಪತ್ರಗಳನ್ನು ವಿತರಿಸಲಾಯಿತು. ಜಿಲ್ಲಾಡಳಿತದ ನೇತೃತ್ವದಲ್ಲಿ ಬುಡಕಟ್ಟು ಪ್ರದೇಶದಲ್ಲಿ ಜಾರಿಗೆ ತರಲಾದ ಆಪರೇಷನ್ ಸ್ಮೈಲ್ ಯೋಜನೆ ಅಂಗವಾಗಿ ಬುಡಕಟ್ಟು ಗುಂಪುಗಳಿಗೆ ಭೂಮಿಯ ಹಕ್ಕುಪತ್ರ ವಿತರಿಸಲಾಯಿತು.

ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಭಾಗವಹಿಸಿದ್ದರು. ಶಾಸಕರಾದ ಇ.ಚಂದ್ರಶೇಖರನ್, ವಕೀಲ ಸಿ.ಎಚ್. ಕುಞಂಬು, ಎ.ಕೆ.ಎಂ. ಅಶ್ರಫ್, ನಗರಸಭೆ ಅಧ್ಯಕ್ಷ ಅಬ್ಬಾಸ್ ಬೀಗಂ, ನಗರಸಭೆ ವಾರ್ಡ್ ಕೌನ್ಸಿಲರ್ ವಿಮಲಾ ಶ್ರೀಧರನ್ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net