ಅರಕೇರಾ: ಹೊಸದಾಗಿ ರಚನೆಯಾಗಿರುವ ಅರಕೇರಾ ತಾಲೂಕಿಗೆ ಸೇರ್ಪಡೆಯಾದ ವಿವಿಧ ಹಳ್ಳಿಗಳನ್ನು ಭೂಮಿ ತಂತ್ರಾಂಶದಲ್ಲಿ ಸೇರಿಸಲಾಗಿದೆ ಎಂದು ತಹಸೀಲ್ದಾರ್ ಅಮರೇಶ ಬಿರಾದಾರ್ ತಿಳಿಸಿದ್ದಾರೆ.
ನ.5 ರಿಂದ ಭೂಮಿ ಕಾವೇರಿ, ಮೋಜಿಣಿ, ಎಜೆಎಸ್‌ಕೆ, ಮೊದಲಾದ ಅವಲಂಬಿತ ನೋಂದಣಿ ಅರ್ಜಿ ಸ್ವೀಕೃತ ವಹಿವಾಟನ್ನು ಸ್ಥಗಿತಗೊಳಿಸಲಾಗಿತ್ತು.
ಭೂಮಿ ತಂತ್ರಾಂಶಕ್ಕೆ ಅರಕೇರಾ ತಾಲೂಕಿಗೆ ಸಂಬಂಧಿಸಿದಂತೆ ಗ್ರಾಮಗಳನ್ನು ಪ್ರಸ್ತುತ ವಿಭಜಿಸಲಾಗಿದ್ದು, ಭೂಮಿ ವಹಿವಾಟುಗಳ ಪ್ರಕ್ರಿಯೆ ಆರಂಭವಾಗಿರುತ್ತದೆ.
ಹೀಗಾಗಿ ನೋಂದಣಿ ಕಾರ್ಯ, ಮೋಜಿಣಿ, ಎಜೆಎಸ್‌ಕೆ ಭೂಮಿಗೆ ಸಂಬಂಧಿಸಿದ ಎಲ್ಲ ವಹಿವಾಟುಗಳನ್ನು ಆರಂಭಿಸಲು ಜಿಲ್ಲಾ ನೋಂದಣಾಧಿಕಾರಿಗಳಿಗೆ ಡಿಸಿ ಸೂಚಿಸರುತ್ತಾರೆ. ಆದ್ದರಿಂದ ಹತ್ತಿರದ ಸಿರವಾರ ತಾಲೂಕಿನ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.