

ಸವಣೂರ: ಜಮೀನಿನಲ್ಲಿ ತೋಗರಿ ಬೆಳೆ ಕಟಾವು ಮಾಡುತ್ತಿದ್ದ ಮಹಿಳೆ ಹಾವು ಕಚ್ಚಿ ಮೃತಪಟ್ಟ ಘಟನೆ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಜಯವ್ವ ಯಲ್ಲಪ್ಪ ಮೂಲಿಮನಿ (41) ಮೃತ ಮಹಿಳೆ.
ಇವರು ಜಮೀನಿನಲ್ಲಿ ತೋಗರಿ ಬೆಳೆ ಕಟಾವು ಮಾಡುತ್ತಿದ್ದ ಸಮಯದಲ್ಲಿ ಕಾಲಿಗೆ ಹಾವು ಕಚ್ಚಿದೆ. ಇದರಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.