ಜಮೀನಿನಲ್ಲಿ ಹಾವು ಕಚ್ಚಿ ಮಹಿಳೆ ಸಾವು

Snake-isolated-768x401
Published on

ರಾಣೆಬೆನ್ನೂರ: ಹಾವು ಕಚ್ಚಿ ಮಹಿಳೆಯೊಬ್ಬಳು ಮೃತಪಟ್ಟ ಘಟನೆ ತಾಲೂಕಿನ ದೇವಗೊಂಗನಕಟ್ಟಿ ರಸ್ತೆಯ ಜಮೀನುವೊಂದರಲ್ಲಿ ಶುಕ್ರವಾರ ಸಂಭವಿಸಿದೆ.
ತಾಲೂಕಿನ ಇಟಗಿ ಗ್ರಾಮದ ಸುನಿತಾ ಅಣ್ಣಪ್ಪ ಬೆನಕನಕೊಂಡ (34) ಮೃತ ಮಹಿಳೆ.
ಇವರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಹಾವು ಕಚ್ಚಿ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net