ಕಳಚೆ ಸಮೀಪ ಮತ್ತೆ ಭೂ ಕುಸಿತ

kalache land slude
Published on

ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಗ್ರಾ.ಪಂ ವ್ಯಾಪ್ತಿಯ ಕಳಚೆಯಲ್ಲಿ ಧರೆಯ ಮಣ್ಣು ಕುಸಿತ ಮುಂದುವರಿದಿದೆ.

ಮಾನಿಗದ್ದೆಕುಂಬ್ರಿಯ ಜನಾರ್ದನ ಹೆಬ್ಬಾರ್ ಅವರ ತೋಟದ ಪಕ್ಕದ ಗುಡ್ಡ ಕುಸಿಯುತ್ತಿದೆ. ಕಮಲಾಕರ ಭಾಗ್ವತ ಅವರ ಮನೆಯ ಎದುರಿನ ಭೂಮಿ ಕುಸಿಯುತ್ತಿದೆ. ಉದಯ ಐತಾಳ ಅವರ ಮನೆಯ ಎದುರಿನ ಧರೆಯೂ ಕುಸಿಯುತ್ತಿದೆ

ಕಂದಾಯ, ಗ್ರಾ.ಪಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದ್ದಾರೆ. ಗುಡ್ಡ ಕುಸಿತ ಉಂಟಾಗುತ್ತಿರುವ ಪ್ರದೇಶದ ಸಮೀಪ ಇರುವ ಮನೆಯವರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಎರಡು ಬಾರಿ ತಿಳುವಳಿಕೆ ಪತ್ರಗಳನ್ನೂ ನೀಡಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net