ಶಿರಸಿ- ಕುಮಟಾ ರಸ್ತೆಯಲ್ಲಿ ದರೆ ಕುಸಿತ ಆತಂಕ

Sirsi AC Devaraj R. visited land slide area in Sirsi-kumata Road.
Published on

ಶಿರಸಿ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಶಿರಸಿ ಕುಮಟಾ ಹೆದ್ದಾರಿ ಯಲ್ಲಿ ದರೆ ಕುಸಿತ ಉಂಟಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ವಣವಾಗಿದೆ.

ಭಾನುವಾರ ರಾತ್ರಿ ರಾಗೀಹೊಸಳ್ಳಿ ಸಮೀಪ ದರೆ ಕುಸಿದು ಮೂರು ಗಂಟೆಗೂ ಅಧಿಕ ಕಾಲ ಹೆದ್ದಾರಿ ಬಂದ್ ಆಗಿತ್ತು.

ಧರೆ ಕುಸಿದು ಹೆದ್ದಾರಿ ಬಂದ್ ಆಗುವ ಲಕ್ಷಣಗಳಿರುವ ಸ್ಥಳಗಳಿಗೆ ಸೋಮವಾರ ಶಿರಸಿ ಉಪವಿಭಾಗಾಧಿಕಾರಿ ದೇವರಾಜ್ ಆರ್. ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದರೆ ಕುಸಿತ ಉಂಟಾದರೆ ತಕ್ಷಣ ತೆರುವು ಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತಹಸೀಲ್ದಾರ್ ಶ್ರೀಧರ ಮುಂದಲಮನಿ. ಶಿರಸಿ ಗ್ರಾಮೀಣ ಠಾಣೆ ಪಿಎಸ್​ಐ ಪ್ರತಾಪ, ಅರಣ್ಯಾಧಿಕಾರಿ ಮಂಜುನಾಥ ಹೆಬ್ಬಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net